ಮಡಿಕೇರಿ ಫೆ.4 NEWS DESK : ಮಾನವ ಕಲ್ಯಾಣಕ್ಕಾಗಿ ಅನೇಕ ಕಾರ್ಯಗಳನ್ನು ಕೈಗೊಳ್ಳುತ್ತಿರುವ, “ಲಜ್ಞಾ ಇಮಾಇಲ್ಲಾ” ಎಂಬ ಹೆಸರಿನಿಂದ ಕರೆಯಲ್ಪಡುವ ಅಹ್ಮದಿಯಾ ಮುಸ್ಲಿಮ್ ಸಂಘಟನೆಯ ಮಹಿಳಾ ವಿಭಾಗದ ವತಿಯಿಂದ ಮಡಿಕೇರಿಯ ಅಬ್ದುಲ್ ಕಲಾಂ ಲೇಔಟ್ ನಲ್ಲಿರುವ ವಿಕಾಸ್ ಜನ ಸೇವಾ ಟ್ರಸ್ಟ್ ಆಶ್ರಮದ ಹಿರಿಯ ನಾಗರಿಕರಿಗೆ ದಂತಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
“ಲಜ್ನಾ ಇಮಾಇಲ್ಲಾ’ ಅಧ್ಯಕ್ಷರಾದ ರೂಮಾನ್ ರಿಜ್ವಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದ ನೇತೃತ್ವವನ್ನು ಸರಕಾರಿ ಆಸ್ಪತ್ರೆಯ ದಂತ ವ್ಯೆದ್ಯ ಡಾ.ಅಫ್ರೀನ್ ಹಾಗೂ ಡಾ.ಮೆಲ್ವಿನ್ ವಹಿಸಿದ್ದರು. ಸುಮಾರು 35 ಮಂದಿಗೆ ದಂತ ಚಿಕಿತ್ಸೆ ಮಾಡಲಾಯಿತು, ಅಲ್ಲದೆ ದಂತದ ಆರೋಗ್ಯಕ್ಕೆ ಬೇಕಾದ ವಸ್ತುಗಳು ಮತ್ತು ಔಷಧಿಯನ್ನು ವಿತರಿಸಲಾಯಿತು.
ಆಶ್ರಮಕ್ಕೆ ಅಗತ್ಯವಾಗಿದ್ದ ಟೇಬಲ್ ಗಳು ಹಾಗೂ ಫ್ಯಾನ್ ಗಳನ್ನು ಇದೇ ಸಂದರ್ಭ ವಿತರಿಸಲಾಯಿತು. ಲಜ್ನಾ ಇಮಾಇಲ್ಲಾಹ್ ವಿಭಾಗದ ಮಹಿಳಾ ಸದಸ್ಯರು, ಅಹ್ಮದಿಯಾ ಮುಸ್ಲಿಮ್ ಜಮಾಅತ್ ನ ಹಲವು ಸದಸ್ಯರು, ಆಶ್ರಮದ ಮುಖ್ಯಸ್ಥ ಮಂಜುನಾಥ್ ಹಾಗೂ ಸಿಬ್ಬಂದಿಗಳು ಶಿಬಿರದ ಯಶಸ್ಸಿಗಾಗಿ ಕೈಜೋಡಿಸಿದರು.











