ನಾಪೋಕ್ಲು ಫೆ.5 : ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ರೈತರ ತೋಟಗಳಲ್ಲಿ ಕೊಕ್ಕೋ ಪ್ರೂನಿಂಗ್ (ಸವರುವಿಕೆ) ಮತ್ತು ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಿ.ಬಿ.ನಾಗೇಶ್ ಕುಂದಲ್ಪಾ ವಹಿಸಿ “ಅಡಿಕೆ ಹಳದಿ ರೋಗದಿಂದ ಸಮಸ್ಯೆಗೊಳಗಾದ ನಾವುಗಳು ಪ್ರಮುಖ ಪರ್ಯಾಯ ಬೆಳೆಯಾದ ಕೊಕ್ಕೋವನ್ನು ಕ್ರಮಬದ್ಧವಾಗಿ ಬೆಳೆಸಿ ಅಧಿಕ ಇಳುವರಿ ಪಡೆಯುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ” ಎಂದು ಹೇಳಿದರು.
ಕ್ಯಾoಪ್ಕೋ ಸಂಸ್ಥೆಯ ಸಿಬ್ಬಂದಿ ಕೆ.ಚಂದ್ರಶೇಖರ್ ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪಿ.ಎಂ.ಅಶೋಕ, ಗ್ರಾ.ಪಂ ಅಧ್ಯಕ್ಷರಾದ ಚಂದ್ರಕಲಾ ಬಳ್ಳಡ್ಕ, ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸಂಘದ ನಿರ್ದೇಶಕರುಗಳಾದ ದೀನರಾಜ ದೊಡ್ಡಡ್ಕ, ಧನಂಜಯ ಕೋಡಿ, ಜಯರಾಮ ನಿಡ್ಯಮಲೆ ಬಿ, ಪಿ.ಟಿ.ಜಯರಾಮ, ಶೇಷಪ್ಪ ನಾಯ್ಕ ನಿಡ್ಯಮಲೆ, ಕಿರಣ ಬಂಗಾರಕೋಡಿ, ಹೊನ್ನಪ್ಪ ಅಮಚೂರು, ಸೀತಾರಾಮ ಕದಿಕಡ್ಕ, ಪುಷ್ಪಾವತಿ ವ್ಯಾಪಾರೆ, ಕೆ.ಎಂ.ಪ್ರದೀಪ, ಪ್ರಮೀಳಾ ಎನ್ ಬಂಗಾರಕೋಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಭಾಷ್ಚಂದ್ರ ಬಂಗಾರಕೋಡಿ, ಸುರೇಶ ಪೆರುಮುಂಡ ಹಾಗೂ ಸಂಘದ ರೈತ ಸದಸ್ಯರು ಹಾಜರಿದ್ದರು.
ಪೆರಾಜೆ ಗ್ರಾಮದ ಅಡ್ಕದ ಐನ್ ಮನೆ ವಠಾರ, ಕುಶಾಲಪ್ಪ ಅಡ್ಕ ಹಾಗೂ ನಂದಕುಮಾರ್ ಅಡ್ಕ, ತಿರುಮಲೇಶ್ವರಿ ಬೊಮ್ಮನಮನೆ ಹಾಗೂ ಗಣಪಯ್ಯ, ಭಾಸ್ಕರ ದೊಡ್ಡಡ್ಕ ತೋಟದಲ್ಲಿ ಪ್ರಾತ್ಯಕ್ಷಿಕೆ, ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ರೈತ ಸದಸ್ಯರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.
ವರದಿ : ದುಗ್ಗಳ ಸದಾನಂದ