ಮಡಿಕೇರಿ, ಫೆ. 5 NEWS DESK : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ), ಕೊಡಗು ಸಂಘದ ವತಿಯಿಂದ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣ ಕಾಯ೯ಕ್ರಮ ನಡೆಯಿತು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಕುಮಾರ್ “ಆಯುರ್ವೇದದಲ್ಲಿ ಮಧುಮೇಹದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ”ಯ ಬಗ್ಗೆ ಮಾಹಿತಿ ನೀಡಿದರು. ಹೊಸ ಯುಕ್ತಿ ಹಳೇ ತತ್ವಗಳನ್ನು ಒಳಗೂಡಿಸಿಕೊಂಡು ಹೇಗೆ ನಮ್ಮ ಸುತ್ತಲೂ ಲಭ್ಯವಿರುವ ಗಿಡಮೂಲಿಕೆಗಳನ್ನು ಸೂಕ್ತವಾಗಿ ಬಳಸುವುದರಿಂದ, ಸೂಕ್ತ ಯೋಗಾಭ್ಯಾಸದಿಂದ ಮಧುಮೇಹವನ್ನು ಯಾವ ರೀತಿಯಲ್ಲಿ ನಿಯಂತ್ರಿಸಬಹುದು ಎಂದು ಅವರು ತಿಳಿಸಿದರು.
ನೀಮಾ ಕೊಡಗು ಅಧ್ಯಕ್ಷ ಡಾ.ರಾಜಾರಾಮ್ ಅಧ್ಯಕ್ಶ್ಯತೆಯಲ್ಲಿ ನಡೆದ ಕಾಯಾ೯ಗಾರದ ಪ್ರಯೋಜನವನ್ನು ಕೊಡಗಿನ 30ಕ್ಕೂ ಹೆಚ್ಚು ಆಯುಷ್ ವೈದ್ಯರು ಪಡೆದುಕೊಂಡರು.
ಡಾ. ಸೌಮ್ಯ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು. ನೀಮಾ ಕೊಡಗು ಮಹಿಳಾ ಘಟಕದ ಅಧ್ಯಕ್ಷೆ ಡಾ. ಶೈಲಜಾ ರಾಜೇಂದ್ರ, ಹಿರಿಯ ವೈದ್ಯರಾದ ಡಾ. ಉದಯಶಂಕರ್, ಡಾ. ಉದಯಕುಮಾರ್, ಡಾ. ಶೈಲಜಾ ಮುರಳೀಧರ, ಡಾ. ರಾಜೇಂದ್ರ, ಡಾ. ಷೆನೋಯ್, ಡಾ. ವಿವೇಕ್ ಮತ್ತು ಇತರರು ಉಪಸ್ಥಿತರಿದ್ದರು. ಡಾ. ಅನುಷಾ ವಂದಿಸಿದರು.