ಮಡಿಕೇರಿ ಫೆ.6 NEWS DESK : ಇಡೀ ರಾಷ್ಟ್ರದಲ್ಲೆ ಕರ್ನಾಟಕ ಅತೀ ಹೆಚ್ಚಿನ ತೆರಿಗೆ ಪಾವತಿಸುವ ರಾಜ್ಯವಾಗಿದ್ದರು, ಅದಕ್ಕೆ ಪ್ರತಿಯಾಗಿ ಕೇಂದ್ರದಿಂದ ನಿರೀಕ್ಷಿತ ನೆರವು ಒದಗಿ ಬರುತ್ತಿಲ್ಲ. ಪ್ರಸ್ತುತ ದಕ್ಷಿಣ ಭಾರತದ ‘ಹಣ’ ಉತ್ತರಕ್ಕೆ ಹರಿದು ಹೋಗುತ್ತಿದೆಯೆಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಇಂದು ಕೇಂದ್ರಕ್ಕೆ ನೀಡುತ್ತಿರುವ ತೆರಿಗೆಗೆ ಪ್ರತಿಯಾಗಿ ಅಗತ್ಯ ನೆರವನ್ನು ಬಯಸುತ್ತಿದ್ದರು, ಕೇಂದ್ರ ಸರ್ಕಾರ ಜನಸಂಖ್ಯೆಯ ಮಾನದಂಡವನ್ನು ಮುಂದೆ ಮಾಡಿ ನಮಗೆ ದೊರಕಬೇಕಾದ ನೆರವನ್ನು ನೀಡದೆ, ಉತ್ತರದ ರಾಜ್ಯಗಳಿಗೆ ನೀಡುತ್ತಿದೆ. ಈ ರೀತಿ ನೀಡುತ್ತಿರುವ ಹಣ ನಮ್ಮ ನಿಮ್ಮೆಲ್ಲರ ಶ್ರಮದ ಹಣವಾಗಿದೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕೆ.ಎಂ.ಗಣೇಶ್, ಬಿ.ಪಿ.ದೇವಪ್ಪ ಗೌಡ, ಶೌಕತ್ ಅಲಿ ಹಾಗೂ ಡೆನ್ನಿ ಬರೋಸ್ ಉಪಸ್ಥಿತರಿದ್ದರು.