ಮಡಿಕೇರಿ ಫೆ.8 NEWS DESK : ಗೋಣಿಕೊಪ್ಪಲು ಕಾಫಿ ಮಂಡಳಿ ವಿಸ್ತರಣಾ ವಿಭಾಗದ ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿ, ನಿಟ್ಟೂರು ಕಾರ್ಮಾಡು ಇಗ್ಗುತ್ತಪ್ಪ ಸಂಘದ ಸಹಕಾರದೊಂದಿಗೆ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಕಾಫಿ ಬೆಳೆಗಾರರಿಗೆ ಫೆ.13 ರಂದು ಮಣ್ಣು ಪರೀಕ್ಷೆ ಅಭಿಯಾನ ಮತ್ತು ಕಾಫಿ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಕಾರ್ಯಾಗಾರ ನಡೆಯಲಿದೆ.
ಅಂದು ಬೆಳಗ್ಗೆ 9.45ಗಂಟೆಗೆ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನಿಟ್ಪೂರು ಗ್ರಾ.ಪಂ ವ್ಯಾಪ್ತಿಯ ಕಾಫಿ ಬೆಳೆಗಾರರು ತಮ್ಮ ತೋಟದ ಮಣ್ಣಿನ ಮಾದರಿಯನ್ನು ಕಾಫಿ ಮಂಡಳಿ ಶಿಫಾರಸು ಮಾಡಿದ ಮಾದರಿಯಲ್ಲಿ ಮಣ್ಣಿನ ಮಾದರಿ ಸಂಗ್ರಹಣೆಯನ್ನು ತಂದು ಫಲಿತಾಂಶವನ್ನು ಪಡೆದುಕೊಳ್ಳಲು ಗೋಣಿಕೊಪ್ಪಲು ಕಾಫಿ ಮಂಡಳಿ ಸಂಪರ್ಕ ಅಧಿಕಾರಿ ಡಿ.ಎಸ್.ಮುಖಾರಿಬ್ ಹಾಗೂ ನಿಟ್ಟೂರು ಗ್ರಾ.ಪಂ ಅಧ್ಯಕ್ಷರು ಕೋರಿದ್ದಾರೆ.
ಬೆಳೆಗಾರರು ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ಬೆಳಿಗ್ಗೆ 9.45ಗಂಟೆಗೆ ಹಾಜರಿದ್ದು, ಮಣ್ಣಿನ ರಸಸಾರ ಪರೀಕ್ಷೆಗೆ ರೂ.25, ಸಾರಜನಕ, ರಂಜಕ, ಪೊಟ್ಯಾಶ್ ಪರೀಕ್ಷೆಗೆ ರೂ.150 ಬೆಲೆ ನಿಗಧಿಪಡಿಸಲಾಗಿದ್ದು, ನುರಿತ ತಜ್ಞರಿಂದ ಕಾಫಿ ಬೇಸಾಯದ ಬಗ್ಗೆ ವಿಶೇಷ ಮಾಹಿತಿ ನೀಡಲಾಗುವುದೆಂದರು.