ಮಡಿಕೇರಿ ಫೆ.8 NEWS DESK : ಕಳೆದ 6 ತಿಂಗಳಿಂದ ಇಡೀ ದೇಶದಾದ್ಯಂತ ಬರೀ ರಾಮ ಮಂತ್ರದ ಕಂಪು ಇಡೀ ದೇಶದಾದ್ಯಂತ ಪಸರಿಸಿತು. ಜನವರಿ ತಿಂಗಳು ಅಂತು ಇಡೀ ದೇಶ ರಾಮಮಯಾ ಕೇಸರಿಮಯವಾಗಿತ್ತು. ಅಂದರೆ ಉತ್ಪ್ರೇಕ್ಷೆ ಆಗದು. ಸಾಮಾಜಿಕ ಜಾಲ ತಾಣದಲ್ಲಿ, ದೃಶ್ಯ ಮಾಧ್ಯಮ ಪತ್ರಿಕೆಗಳಲ್ಲಿ ಗಾಳಿ, ಬೆಳಕು, ನೀರು ಕೂಡ ರಾಮಮಯಾವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದೂ ವಿಶೇಷವಾಗಿತ್ತು. ಅದಕ್ಕಾಗಿ ಅವರು ಕಠಿಣ ವ್ರತ ಕೂಡ ಕೈ ಗೊಂಡಿದ್ದರು. ಅಲ್ಪ ಸ್ವಲ್ಪ ರಾಜಕೀಯ ಕೆಸರಾಟ ಬಿಟ್ಟರೇ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಯಿತು. ಭಾರತದಲ್ಲಿ ಹೊಸ ಇತಿಹಾಸ ನಿರ್ಮಾಣವಾಯಿತು. ಅದುವೇ ದಶಕಗಳ ಕಾಲ ಹಿಂದೂಗಳು ಹೋರಾಟ ನಡೆಸಿ ಕನಸು ಕಂಡಿದ್ದ ರಾಮಮಂದಿರದ ಅವರ ಕನಸು ಸಾಕಾರಗೊಂಡ ದಿನ.
1990ರ ಆಸುಪಾಸಿನಿಂದ ಶ್ರೀ ರಾಮಚಂದ್ರನನ್ನು ಭಾರತೀಯ ರಾಜಕೀಯ ಚದುರಂಗದಾಟದ ರಂಗದಲ್ಲಿ ಮುನ್ನಲೆ ತರಲಾಯಿತು. ಆಗ ತಾನೇ ರಾಜಕೀಯ ಚದುರಂಗದಾಟದಲ್ಲಿ ಮೆಲ್ಲನೇ ಕಾಲು ಇಡುತಿದ್ದ ಭಾರತೀಯ ಜನತಾ ಪಕ್ಷದ ಒಂದಂಶ ಕಾರ್ಯಕ್ರಮವಾಯಿತು. ರಾಮಮಂದಿರ ನಿರ್ಮಾಣ, ಲಾಲ್ ಕೃಷ್ಣ ಅಡ್ವಾನಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಕರ್ನಾಟಕದಿಂದ ಯಡಿಯೂರಪ್ಪ ಸೇರಿ ಬಹುತೇಕ ಎಲ್ಲಾ ನಾಯಕರು ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ಸಕ್ರಿಯವಾಗಿ ಪಾಲುಗೊಂಡಿದರು. ಹೀಗೆ ಹತ್ತು ಹಲವು ನಾಯಕರ ಹೋರಾಟ, ಅಡ್ವಾಣಿಯ ರಥ ಯಾತ್ರೆ, ಕರಸೇವೆ, ಇಟ್ಟಿಗೆ ಪೂಜೆ ಹೀಗೆ ನಡೆಸಿದ ನಿರಂತರ ಹೋರಾಟದ ಫಲವೇ ಇಂದು ರಾಮ ಮಂದಿರದ ಕನಸು ನನಸಾಗಲು ಕಾರಣವಾಯಿತು. ಇದರೊಡನೆ ಭಾರತಿಯ ಜನತಾ ಪಕ್ಷವು ರಾಮ ನಾಮದ ಬೆಂಬಲದಿಂದ ಅನೇಕ ರಾಜ್ಯಗಳಲ್ಲಿ ಅಧಿಕಾರವನ್ನು ಅನುಭವಿಸಿತು. ಯಾವಾಗ ಅಧಿಕಾರದ ರುಚಿ ಸಿಕ್ಕಿತೊ ರಾಮ ಮಂದಿರದ ಯೋಜನೆ ನಿಧಾನವಾಗತೊಡಗಿತು. ಅದರೊಡನೆ ವಿಷಯವು ನ್ಯಾಯಲಯದ ಮುಂದೆ ಇದ್ದುದ್ದರಿಂದ ನಿರ್ಮಾಣ ಕಾರ್ಯಕ್ರಮ ವಿಳಂಬವಾಯಿತು. ಎಲ್ಲಾ ಅಡೆತಡೆ ದಾಟಿ ಜನವರಿ 22 ರಂದು ಅಯೋಧ್ಯೆಯಲ್ಲಿ ಇತಿಹಾಸ ನಿರ್ಮಾಣವಾಯಿತು. ಅದಕ್ಕೆ ಮುನ್ನುಡಿಯನ್ನು ಮೋದಿ ಬರೆದರೂ, ಅದರ ಹಿಂದೆ ಸಾವಿರರೂ ಜನರ ಶ್ರಮ, ಬಲಿದಾನ, ತ್ಯಾಗ ಅದರಲ್ಲ್ಲೂ ಅಡ್ವಾಣಿಯ ಧೈರ್ಯ ಎಲ್ಲರೂ ತಲೆ ತೂಗುವಂತದ್ದು. ಬಿಜೆಪಿಯ ಹಿರಿಯ ನಾಯಕರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಿಂದ ದೂರ ಉಳಿದರೊ ದೂರವಿಟ್ಟರೊ ಎಂಬುದು ನಿಜವಾದ ರಾಮ ಭಕ್ತಿ, ಹಳೆಯ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಯಕ್ಷ ಪ್ರಶ್ನೆ ಆಗಿ ಉಳಿದಿದೆ. ರಾಮ ಭೂಮಿ ಜನ್ಮ ಭೂಮಿ ವಿವಾದ ಮಂದಿರ ನಿರ್ಮಾಣದೊಂದಿಗೆ ಹೊಸ ಶಕೆ ಆರಂಭವಾಯಿತು ದೇಶದೆಲ್ಲೆಡೆ ರಾಮ ಕಂಪು ಪಸರಿಸಿತು. ಮುಂದಿನ ಕೆಲವು ದಿನಗಳವರೆಗೆ ಲಕ್ಷಾಂತರ ಭಕ್ತರು ರಾಮನ ಬಾಲರಾಮನ ದರ್ಶನ ಪಡೆದು ಪುನೀsತರಾಗುತಾರೆ. ಇಲ್ಲಿ ನಾವು ಚಿಂತನೆ ನಡೆಸಬೇಕಾಗಿದ್ದು ರಾಮ ಮಂದಿರದ ನಿರ್ಮಾಣದಿಂದ ಸಮಾಜದಲ್ಲಿ ಬಾರಿ ಬದಲಾವಣೆ ನಿರೀಕ್ಷಿಸಿದ್ದೆ. ಅದ್ರೆ ನಮ್ಮ ಊಹೆ ತಪ್ಪು ಆಗುತ್ತೆ ಏಕೆಂದ್ರೆ ಮಂದಿರ ನಿರ್ಮಾಣದ ಆರಂಭದಿಂದ ಮುಕ್ತಾಯದವರೆಗೂ ರಾಜಕೀಯ ನಂಟು ಅಂಟಿ ಕೊಂಡಿತು. ಪ್ರಾಣ ಪ್ರತಿಸ್ಥಾಪನೆಯಲ್ಲೂ ಮುಂದಿನ ಲೋಕಸಭೆ ಚುನಾವಣೆಯ ಕರಿ ನೆರಳು ಆವರಿಸಿದ್ದು ನಗ್ನ ಸತ್ಯ. ಪ್ರಾಣ ಪ್ರತಿಸ್ಠಾಪನೆ ನಂತರದ ರಾಜಕೀಯ ಬದಲಾವಣೆ ಅದಕ್ಕೆ ಉದಾಹರಣೆ ನಮಗೆ ಇಲ್ಲಿ ಅದ್ದೂರಿ ಮತ್ತೆ ರಾಜಕೀಯ ಉದ್ದೇಶ ಎದ್ದು ಕಾಣುತದೆ ಹೊರತು ಶ್ರೀರಾಮ ಚಂದ್ರನ ಆದರ್ಶಗಳನ್ನು ಯಾರು ಪಾಲಿಸುವುದಿಲ್ಲವೇಕೆ? ಜನವರಿ 22 ರಂದು ದೇಶದಾದ್ಯಂತ ಒಂದು ರೀತಿಯ ಸಂಚಲನ ಮೂಡಿಸಿತು. ಎಲ್ಲೆಂದರಲ್ಲಿ ಬಂಟಿಗ್ ಗಳು, ಹೋಮ ಹವನಗಳು, ಅನ್ನದಾನ, ಪೂಜೆ ಪುರಸ್ಕಾರ ಒಂದು ರೀತಿಯಲ್ಲಿ ಸ್ವತಃ ಶ್ರೀ ರಾಮಚಂದ್ರನೇ ಭೂಮಿಗೇ ಬಂದಿದ್ರೆ ಜನರ ಉತ್ಸಾಹ ಕಂಡು ದಂಗಾಗಿ ಹೋಗುತಿದ್ದ. ಇಲ್ಲಿ ವಿಷಯವೆಂದರೆ ಶ್ರೀ ರಾಮಚಂದ್ರ, ಭಾರತೀಯ ಜನತಾ ಪಕ್ಷವು ಮತ್ತೆ ಅನೇಕ ಸಂಘಟನೆಗಳು ಈ ಕೆಲಸದಲ್ಲಿ ಕೈ ಜೋಡಿಸಿದ್ದರು. ಸಾಮಾಜಿಕವಾಗಿ ನಾವು ಬದಲಾವಣೆ ತರುವಲ್ಲಿ ವಿಫಲವಾಯಿತು. ರಾಮನಾಮಾ ಜನರಲ್ಲಿ ಬದಲಾವಣೆ ತರಬೇಕಿತ್ತು. ಅದು ತರಲಿಲ್ಲ. ಜನರು ರಾಮನನ್ನು ಮಂದಿರದಲ್ಲಿ, ಬೀದಿಯಲ್ಲಿ ಇಟ್ಟರು ಹೊರತು ಮನೆಗೆ ತರಲಿಲ್ಲ ಹೇಳಿ ಹಿಂದೆ ದೇವರನ್ನು ಮನೆಯಲ್ಲಿ ಇಡುತಿದ್ದರು. ಆಗಿನ ಕಾಲದಲ್ಲಿ ಬಡತನವಿತ್ತು. ಶ್ರಮಿಕ ಜೀವಿಗಳು ದಿನ ದೇವಸ್ಥಾನಕ್ಕೆ ಹೋಗಲು ಸಮಯವಿಲ್ಲ, ಹಣವು ಇಲ.್ಲ ಸಂಜೆ ಅದ್ರೆ ಮನೆಯಲ್ಲಿ ಮಕ್ಕಳನನ್ನ ಕೂರಿಸಿ ಸಾಮೂಹಿಕ ಪ್ರಾರ್ಥನೆ ಭಜನೆ ಮಾಡಿಸುತಿದ್ದರು. ಅಂದು ಮಕ್ಕಳಲ್ಲಿ ಒಂದು ರೀತಿಯ ಶಿಸ್ತು ಸಣ್ಣ ವಯಸ್ಸಿನಿಂದ ಬೆಳೆದು ಬಂದು ಕೊನೆವರೆಗೂ ಇರುತಿತ್ತು. ನಾಗರಿಕತೆ ಬೆಳೆದಂತೆ ಮಕ್ಕಳು ದೇವಸ್ಥಾನ ಹೋಗಲಿ ದೇವರವನ್ನೆ ಮರಿಯುವ ಹಾಗೆ ಆಗಿದೆ. ಅದು ಅವರ ತಪ್ಪಲ್ಲ. ಈಗಿನ ವಿದ್ಯಾಭ್ಯಾಸದ ವ್ಯವಸ್ಥೆ ಹಾಗೆ ಇದೆ. ಅದರಿಂದ ಅವರನ್ನು ಇನ್ನು ಪೋಷಕರು ಅವರ ಜೀವನ ದಿನ ನಿತ್ಯದ ಜಂಜಾಟದಲೇ ಕಳೆದು ಹೋಗುತದೆ.
ಹಿಂದೂ ಧರ್ಮದಲ್ಲಿ ಹಿಂದೆ ವರ್ಷಕೊಮ್ಮೆ ದೇವರ ಉತ್ಸವ ನಡೆಯುತಿತ್ತು. ಅಂದು ಇಡಿ ಊರೇ ಸೇರಿ ಶ್ರದ್ದೆ ಭಕ್ತಿ ಇತ್ತು. ಆಡಂಬರ ಇರಲಿಲ್ಲ. ಇಂದು ಆಡಂಭರ ಅಬ್ಬರ ಎರಡು ಇದೆ. ಶ್ರದ್ದೆ ಭಕ್ತಿ ಎರಡು ಇಲ್ಲ. ಪ್ರದರ್ಶನ ಮಾತ್ರ ಇದೆ. ಇಂದು ದೇವಸ್ಥಾನದಲ್ಲಿ ನಡೆಯುವ ವಾರ್ಷಿಕೋತ್ಸವದ ಮತ್ತು ಅನ್ನದಾನ ಅದರ ಪರಿಣಾಮವೇ ಇಂದು ಇಷ್ಟ ಧರ್ಮದ ಕ್ರಾಂತಿ ನಡೆದರು ಭಷ್ಟಚಾರ ಕಡಿಮೆಯಾಗಿಲ್ಲ. ಚುನಾವಣೆಗಳು ಧರ್ಮದ ಮೇಲೆ ನಡೆಯುವುದಿಲ್ಲ. ಅದು ಜಾತಿ ಮತು ಹಣದ ಇಂದು ಚುನಾವಣೆಯನ್ನು ಎದುರಿಸಲು ಕೋಟ್ಯಾಂತರ ರೂಪಾಯಿ ಬೇಕಾಗಿದೆ. ಹಿಂದೆ ರಾಜಕೀಯ ಪಕ್ಷಗಳು ಬಡವರಿಗೆ ಹಾಗೂ ಕಾಲೋನಿಗಳಲ್ಲಿ ವಾಸಿಸುವ ನಿರ್ಗತಿಗರಿಗೆ ಚುನಾವಣೆ ಸಮಯದಲ್ಲಿ ಅಲ್ಪಸ್ವಲ್ಪ ಹಣ ನೀಡಿ ಅಭ್ಯಾಸ ಮಾಡಿದ್ದಾರೆ ಈಗ ಅದು ಎಲ್ಲಾ ವರ್ಗದ ಜನರು ಹಣ ನೀಡದಿದ್ದರೆ ಮತ ನೀಡುವುದಿಲ್ಲ. ಅಂದು ಅಧಿಕಾರ ಹಿಡಿಯುವ ಸಲುವಾಗಿ ಎಲ್ಲಾ ರಾಜಕೀಯ ಪಕ್ಷಗಳು ಹಣವನ್ನು ನೀಡುವ ಪರಿಪಾಠವನ್ನು ಬೆಳೆಸಿಕೊಂಡವು. ಆದರೆ ಇಂದು ಅದು ರಾಜಕೀಯ ಪಕ್ಷಕ್ಕೆ ಉರುಳಾಗಿದೆ. ಚುನಾವಣೆ ಸಮಯದಲ್ಲಿ ಯಾವ ರಾಮವು ಯಾವ ರಾಮನ ಆದರ್ಶವು ವಾಸ್ತವವಾಗಿ ಕಾರ್ಯರೂಪಕ್ಕೆ ಬರುವುದಿಲ್ಲ. ಆಧಾರದ ಮೇಲೆ ನಡೆಯುತ್ತದೆ. ಯುವಕರು ಮಾದಕ ವ್ಯಸನಿಗಳಾಗುತಿದ್ದಾರೆ. ಇಂದು ವೈದ್ಯಕೀಯ ಸೇವೆಗಳಾಗಿ ಉಳಿದಿಲ್ಲ. ಇದೇ ರೀತಿ ಶಿಕ್ಷಣ ಕ್ಷೇತ್ರವು ಸೇವೆಗಳಾಗಿ ಉಳಿದಿಲ್ಲ. ಇದು ಕೂಡ ವ್ಯಾಪಾರೀಕರಣವಾಗಿದೆ. ಹೀಗೆ ಎಲ್ಲಾ ಕ್ಷೇತ್ರಗಳು ಲಾಭದ ಲೆಕ್ಕಾಚಾರದಲ್ಲಿ ನಡೆದಿದೆ. ಪರಿಸ್ಥಿತಿ ಹೀಗೆ ಇರುವಾಗ ನಮಗೇಕೆ ಬೇಕು ರಾಮನಾಮ, ರಾಮನ ಆದರ್ಶಗಳು.
ಹಬ್ಬ ಹರಿದಿನಗಳು ಆಢಂಬರವಿದೆ ಹೊರತು ಆಚರಣೆ ಇಲ್ಲ. ಹೀಗೆ ವಿಫಲತೆ ಕಂಡ ಧರ್ಮದ ದ್ರುವೀಕರಣ. ಇಲ್ಲಿ ಉದ್ಭವಿಸುವ ಪ್ರಶ್ನೆ ಏನಂದ್ರೆ ನಿರೀಕ್ಷೆಗೂ ಮೀರಿ ಕಾಣಿಕೆ ರೂಪದಲ್ಲಿ ಬರತೊಡಗಿದೆ. ಇದು ಹೀಗೆ ಮುಂದುವರಿಯುವ ಎಲ್ಲಾ ಲಕ್ಷಣಗಳು ಇವೆ. ಹೀಗಾಗಲೇ ರತ್ನ ಖಚಿತ ಕಿರೀಟಗಳು, ಹಾರಗಳು, ಕೋಟಿಗಟ್ಟಲೆ ಹಣಗಳು ಹರಿದು ಬರತೊಡಗಿದೆ (ದೇಶದಲ್ಲಿ ಜನರ ಕಷ್ಟಕ್ಕೆ ಆಗದಿದ್ರು ದೇವರ ಹುಂಡಿಗೆ ಕೋಟಿಗಟ್ಟಲೆ ಹಣ ಸುರಿದು ತೃಪ್ತಿ ಪಟ್ಟು ಕೊಳ್ಳುತ್ತಾರೆ. ಹೀಗೆ ಬೀಳುವುದು ಬಹುತೇಕ ಕಪ್ಪು ಹಣ ಅಂತ ಬೇರೆ ಹೇಳಬೇಕಾಗಿಲ್ಲ) ಇದು ಹೀಗೆ ಮುಂದುವರೆದ್ರೆ ಇಲ್ಲೂ ರಾಜಕೀಯ, ಭ್ರಷ್ಟಚಾರ ಆರಂಭವಾಗುತ್ತದೆ. ಇಂದು ನಮ್ಮಲ್ಲಿ ಬಡ ದೇವಸ್ಥಾನಗಳು ಬಿಟ್ಟರೆ ಬಹುತೇಕ ಶ್ರೀಮಂತ ದೇವಸ್ಥಾನಗಳು ದೇವರ ಮಂದಿರವಾಗಿ ಉಳಿದಿಲ್ಲ. ವ್ಯಾಪಾರ ಕೇಂದ್ರಗಳಾಗಿದೆ. ಅದರಿಂದ ಭಕ್ತರು ತಮ್ಮ ಅಂದ ಅಭಿಮಾನ ಬಿಟ್ಟು ಕಾಣಿಕೆಗಳನ್ನು ದೇವಸ್ಥಾನದ ಆಡಳಿತ ಮಂಡಳಿಗೇ ಅಥವಾ ಸಂಬಂಧ ಪಟ್ಟ ಪ್ರಾಧಿಕಾರಕ್ಕೆ ನೀಡಿ ಅದಕ್ಕೆ ರಶೀದಿ ಪಡ್ಡೆದರೆ ಅಂದು ಲೆಕ್ಕಕ್ಕೆ ಸಿಗುತ್ತೆ. ತಾವು ದೇವಾತ ಕಾರ್ಯದಲ್ಲಿ ಭಾಗಿಯಾದ ತೃಪ್ತಿ ಸಿಗುತ್ತೆ. ಇದನ್ನ ಯಾಕೆ ಏಕೆ ಬರದೇ ಅಂದ್ರೆ ಶ್ರೀ ರಾಮ ಮಂದಿರ ಬೇರೆ ದೇವಸ್ಥಾನಗಳಂತೆ ಅಲ್ಲ. ಇದರ ನಿರ್ಮಾಣ ಹಿಂದೆ ಶತಮಾನಗಳ ಕನಸ್ಸು ಇದೆ. ದಶಕಗಳ ಕಾಲದ ಹೋರಾಟವಿದೆ. ಕೋಟ್ಯಾಂತರ ಜನರ ಪರಿಶ್ರಮವಿದೆ. ಸಾವಿರರು ಜನರ ಪ್ರಾಣ ತ್ಯಾಗವಿದೆ. ಅನೇಕ ನಾಯಕೆರ ಧ್ಯೇಯವಿದೆ. ಎಲ್ಲಕ್ಕಿಂತ ಶ್ರೀ ರಾಮನ ಧ್ಯೇಯವಿದೆ, ಆದರ್ಶವಿದೆ. ಅದು ಜನರಿಗೆ ತಲುಪಿಸುವ ಕೇಂದ್ರವಾಗಬೇಕು. ಅದು ಬಿಟ್ಟು ಬರೀ ರಾಮ ನಾಮ ಜಪಿಸುವ ಕೇಂದ್ರವಾಗದೆ ಮಾನವ ಧರ್ಮ ಸಾರುವ ಕೇಂದ್ರವಾಗಲಿ.
ಅಂದು ಗಾಂಧೀಜಿ ಸ್ವಚ್ಛ ಮತ್ತು ಅಹಿಂಸ ವಾದದ ಮೂಲಕ ಅಖಂಡ ಭಾರತದ ಕನಸ್ಸು ಕಂಡರು. ಇಂದು ಮೋದಿಜಿ ಹಿಂದೂ ಧರ್ಮದ ಆದರದ ಮೇಲೆ ಮತ್ತು ಸ್ವಚ್ಛಭಾರತ್ ಮೂಲಕ ಅಖಂಡ ಬಲಿಷ್ಠ ಭಾರತದ ಕನಸ್ಸು ಕಂಡವರು. ಅದು ವಿಫಲವಾಯಿತು. ಏಕೆಂದರೆ ಇಲ್ಲಿ ನಾಯಕರ ಧ್ಯೇಯಗಳು ಚಳುವಳಿಗಳಾಗುದಿಲ್ಲ. ರಾಮ ಪ್ರಜನ್ ಮುಗಿತು ರಾಮನ ಆದರ್ಶ ಮುಂದುವರಿಯಲಿ ದಶಕಗಳ ಹೋರಾಟ, ಅನೇಕ ಜನರ ಪರಿಶ್ರಮ, ತ್ಯಾಗ, ಬಲಿದಾನ, ಪ್ರಯತ್ನದ ಫಲವೇ ಇಂದು ರಾಷ್ಟ್ರ ವಾಪ್ತಿ ರಾಮ ನಾಮ ಪಸರಿಸಿತು. ಇಂದಿನ ಭವ್ಯರಾಮ ಮಂದಿರ ನಿರ್ಮಾಣದ ಹಿಂದೆ ಎಷ್ಟು ಜನರ ಪರಿಶ್ರಮವಿದೆ. ಅದರಲ್ಲಿರುವ ಉದ್ದೇಶ ಅರಿವು ಮೂಡಿಸುವ ಕೆಲಸವಾಗುವ ಬೇಕು. ಸಾಮಾಜಿಕ ಕ್ಷೇತ್ರದಲ್ಲಿ ಜನರ ದೈನಂದಿನ ಬದುಕಿನಲ್ಲಿರಾಮನಾಮವು ಬದಲಾವಣೆ ತಂದರೆ ನಡೆದ ಇಷ್ಟೇಲ್ಲ ಪ್ರಯತ್ನಗಳು ಸಾರ್ಥಕತೆ ಕಾಣುತ್ತದೆ.
ಲೇಕನ : ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ
ಮಡಿಕೇರಿ
9448899554