ವಿರಾಜಪೇಟೆ ಫೆ.13 NEWS DESK : ವಿರಾಜಪೇಟೆಯ ಆರ್ಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿರಾಜಪೇಟೆ ಮತ್ತು ಕಲ್ತೋಡು ಕ್ಲಸ್ಟರ್ ಮಟ್ಟದ ನಲಿಕಲಿ ಸಮಾಲೋಚನಾ ಸಭೆಯಲ್ಲಿ ರಾಜ್ಯ ಮಟ್ಟದ ‘ಸುವರ್ಣ ಸಂಭ್ರಮ ಕನ್ನಡಿಗ” ಪ್ರಶಸ್ತಿ ಪಡೆದ ಸಿ.ಆರ್.ಪಿ ವೆಂಕಟೇಶ್ ವಿ.ಟಿ. ಅವರನ್ನು ಶಾಲಾ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರುಗಳು, ವಿದ್ಯಾರ್ಥಿಗಳು ಇದ್ದರು.









