ಮಡಿಕೇರಿ ಫೆ.13 NEWS DESK : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಮಡಿಕೇರಿಯ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಅರೆಭಾಷಿಕ ಗೌಡ ವಧು-ವರರ ಸಮಾವೇಶ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರು ಸರ್ಕಾರಿ ಕಾಲೇಜ್ ನ ನಿವೃತ್ತ ಪ್ರಾಂಶುಪಾಲ ನಂಗಾರು ಲಿಂಗರಾಜು ಅವರು ವಧು-ವರರನ್ನು ಆಯ್ಕೆ ಮಾಡುವಾಗ ಹೆಚ್ಚು ಕಠಿಣ ಕ್ರಮಗಳನ್ನು ಅನುಸರಿಸದೇ ಶೇ.70 ರಷ್ಟು ಹೊಂದಿ ಬಂದರೆ ಮಾತುಕತೆಗೆ ಮುಂದಾಗುವುದು ಸೂಕ್ತ ಎಂದು ಸಲಹೆ ನೀಡಿದರು.
ಕೆಲವು ಸಂದರ್ಭಗಳಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಹೊಂದಾಣಿಕೆಯೇ ಜೀವನವಾಗಿದ್ದು, ಸಂಸಾರದಲ್ಲಿ ಸುಖ, ಸಂತೋಷ ಸಹಬಾಳ್ವೆಯನ್ನು ನಡೆಸಲು ಎಲ್ಲರೂ ಮುಂದಾಗಬೇಕು ಎಂದರು.
ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಕೊಡಗಿನಲ್ಲಿ ಆಸ್ತಿಯಿದ್ದರೆ ಅದನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಂಡು ಹೋಗಬೇಕು. ಹಿರಿಯರು ಹಾಕಿ ಕೊಟ್ಟ ಕೃಷಿ ಪದ್ಧತಿಯನ್ನು ಬಿಡಬಾರದು ಎಂದ ಲಿಂಗರಾಜು, ನಿವೃತ್ತ ನೌಕರರು ಈ ಇಳಿ ವಯಸ್ಸಿನಲ್ಲೂ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಅವರು ಸ್ವಾಗತಿಸಿದರು. ಉಳುವಾರನ ರೋಶನ್ ಕಾರ್ಯಕ್ರಮ ನಿರೂಪಿಸಿ, ವಧು-ವರರ ಮಾಹಿತಿ ನೀಡಿದರು.
ನಿರ್ದೇಶಕಿ ಕೂಡಕಂಡಿ ಉಮಾದೇವಿ ಪ್ರಾರ್ಥಿಸಿ, ಕಾರ್ಯದರ್ಶಿ ಬಾರಿಕೆ ಅಯ್ಯಪ್ಪ ವಂದಿಸಿದರು.
ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಖಜಾಂಚಿ ಕರ್ಣಯ್ಯನ ನಾಗೇಶ್, ಜಂಟಿ ಕಾರ್ಯದರ್ಶಿ ಅತ್ತೇರಿ ಕೃಷ್ಣಪ್ಪ, ನಿರ್ದೇಶಕರಾದ ಪೊನ್ನಚ್ಚನ ಸೋಮಣ್ಣ, ಬೈತಡ್ಕ ಬೆಳ್ಯಪ್ಪ, ದಂಬೆಕೋಡಿ ಆನಂದ, ಕುದುಪಜೆ ಶಾರದ, ತಳೂರು ಕಾಳಪ್ಪ, ಕುಯ್ಯಮುಡಿ ವಸಂತ, ಹೊಸೊಕ್ಲು ಟಿ.ಪೊನ್ನಪ್ಪ, ಗೋದೆಟ್ಟಿರ ರಾಮಯ್ಯ, ಕುಲ್ಲಚೆಟ್ಟಿ ಪೂವಯ್ಯ ಉಪಸ್ಥಿತರಿದ್ದರು.
ವಧು-ವರರ ಸಮಾವೇಶದಲ್ಲಿ 90 ಕ್ಕೂ ಹೆಚ್ಚು ವಧು- ವರರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*