ಮಡಿಕೇರಿ ಫೆ.13 NEWS DESK : ಜಗಜ್ಯೋತಿ ಕಲಾ ವೃಂದ ಮುಂಬೈ(ರಿ)ಕಳೆದ 24 ವರ್ಷಗಳಿಂದ ಕೊಡಮಾಡುತ್ತಿರುವ *ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ -2023,ದತ್ತಿ ಪ್ರಶಸ್ತಿ* ಗೆ ಕೊಡಗಿನ ಸಾಹಿತಿ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಅವರ “ಎದೆ ಬದುವಿನ ಹಾಡು” ಕವನ ಸಂಕಲನದ ಹಸ್ತಪ್ರತಿ ಆಯ್ಕೆಯಾಗಿತ್ತು. ಮುಂಬೈಯ ಡೊಂಬಿವಿಲಿಯ ಲೇವಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಲನ ಭರತ್ ಪ್ರಶಸ್ತಿ ಪಡೆದರು. ಕಥಾ ಪ್ರಶಸ್ತಿಯನ್ನು ದಾಕ್ಷಾಯಿಣಿ ಎಡೇಹಳ್ಳಿಯವರು ಪಡೆದುಕೊಂಡರು.











