ಮಡಿಕೇರಿ ಫೆ.14 NEWS DESK : ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ ಎಸ್ ಎಫ್) ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಅರಬಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಬಿ.ಎ.ಆದಿಲ್
ರಸ ಪ್ರಶ್ನೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಪಾಲಿಬೆಟ್ಟದ ಲೂರ್ಡ್ಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿರುವ ಆದಿಲ್, ಪಾಲಿಬೆಟ್ಟದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಯು.ಕೆ.ಅಶ್ರಫ್ ಹಾಗೂ ಅತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಲೀನಾ ದಂಪತಿಗಳ ಪುತ್ರ.








