ಸುಂಟಿಕೊಪ್ಪ ಫೆ.14 NEWS DESK : ನೂತನವಾಗಿ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಗೌತಮ್ ಅವರನ್ನು ಬಿಜೆಪಿ ಪ್ರಮುಖರು ಸನ್ಮಾನಿಸಿ, ಗೌರವಿಸಿದರು.
ಸುಂಟಿಕೊಪ್ಪ ಹೋಟೆಲ್ ದ್ವಾರಕ ಸಂಭಾಗಣದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಶಕ್ತಿಕೇಂದ್ರದ ಅಧ್ಯಕ್ಷ ಪ್ರಶಾಂತ್ ಸನ್ಮಾನಿಸಿ ಗೌರವಿಸಿದರು.
ಗೌತಮ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ಪ್ರಮುಖರಾದ ಧನು ಕಾವೇರಪ್ಪ, ಬಿ.ಕೆ.ಮೋಹನ್, ತಾಲೂಕು ಪಂಚಾಯಿತಿ ಮಾಜಿಸದಸ್ಯ ವಿಮಲಾವತಿ, ಗ್ರಾ.ಪಂ. ಸದಸ್ಯರುಗಳಾದ ಬಿ.ಎಂ.ಸುರೇಶ್, ಸೋಮನಾಥ್, ಮಂಜುನಾಥ್, ಶಾಂತಿ, ಮಂಜುಳಾ (ರಾಸತಿ), ಗೀತಾ, ವಸಂತಿ ಯುವ ಮೋರ್ಚಾ ಅಧ್ಯಕ್ಷ ವಿಘ್ನೇಶ್ ಹಾಗೂ ಕಾರ್ಯಕರ್ತರು ಮತ್ತಿತರರು ಇದ್ದರು.








