ಮಡಿಕೇರಿ ಫೆ.15 NEWS DESK : ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳನ್ನಾಗಿ ವಿರಾಜಪೇಟೆಯ ಕಾವಾಡಿ ಗ್ರಾಮದ ಪ್ರಸಾದ್ ಚಂಗಪ್ಪ ಹಾಗೂ ಮಡಿಕೇರಿಯ ಇಬ್ಬನಿವಳವಾಡಿ ಗ್ರಾಮದ ವಿನೋದ್ ಪಿ.ಎಂ ಅವರನ್ನು ಆಯ್ಕೆ ಮಾಡಿರುವುದಾಗಿ ಮೋರ್ಚಾದ ನೂತನ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರ ಅನುಮೋದನೆ ಮೇರೆಗೆ ಪಕ್ಷ ಸಂಘಟನೆಯ ದೃಷ್ಟಿಯಿಂದ ಇವರಿಬ್ಬರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಯುವ ಸಮೂಹ ಬಿಜೆಪಿ ಪರವಾಗಿದ್ದು, ಮತ್ತಷ್ಟು ಯುವಬಲವನ್ನು ಹೆಚ್ಚಿಸಿ ಪಕ್ಷವನ್ನು ಬಲಿಷ್ಠಗೊಳಿಸಲಾಗುವುದು ಎಂದು ಮಹೇಶ್ ತಿಮ್ಮಯ್ಯ ಹೇಳಿದ್ದಾರೆ.










