ಮಡಿಕೇರಿ ಫೆ.15 NEWS DESK : ಜ್ಞಾನ ವ್ಯಾಪಿ ಮಸೀದಿ ಅತಿಕ್ರಮಣವಾಗಿದೆ ಎಂದು ಆರೋಪಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಡಿಕೇರಿ ಮುಸ್ಲಿಂ ಜಮಾತ್ ಗಳ ಒಕ್ಕೂಟ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಒಕ್ಕೂಟದ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬರಹಗಾರರು ಹಾಗೂ ಚಿಂತಕರಾದ ಶಿವ ಸುಂದರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಪ್ರತಿ ದೇವಾಲಯ ಇತಿಹಾಸ ತೆಗೆದು ನೋಡಿದರೆ 80 ದೇವಾಲಯಗಳು ಮಾತ್ರ ಹಾಳಾಗಿರಬಹುದು. ಪುರಾತನ ಕಾಲದ ದೇವಾಲಯಗಳನ್ನು ಅಗೆದರೆ ಜೈನ ಬಸದಿ, ಬೌದ್ಧ ಮಂದಿರಗಳು ಸಿಗುತ್ತವೆ. ಒಂದು ದೇವಾಲಯ, ಮಸೀದಿಯನ್ನು ಬೀಳಿಸುವುದು ಅಧರ್ಮ. ತ್ಯಾಗ ಬಲಿದಾನಕ್ಕೆ ಕರೆ ಕೊಟ್ಟವರ ಮಕ್ಕಳ್ಯಾರೂ ರಕ್ತ ಹರಿಸಿಲ್ಲ. ಬಡ ಹಿಂದೂಗಳನ್ನು ಜೈಲಿಗೆ ತಳ್ಳಿ ತಮಾಷೆ ನೋಡುತ್ತಿದ್ದಾರೆ. ಅವರ ಮಕ್ಕಳು ವಿದೇಶಗಳಲ್ಲಿ ಧರ್ಮವನ್ನೇ ಮರೆತು ಆರಾಮಾಗಿದ್ದಾರೆ. ಇದು ಕೇವಲ ಜನರನ್ನು ಒಡೆದು ಆಳುವ ರಾಜಕೀಯ ಎಂದು ಆರೋಪಿಸಿದರು.
1991ರ ಕಾಯ್ದೆಯನ್ವಯ ಸಂವಿಧಾನದಡಿ ನಮ್ಮ ದೇಶದ ಮೂಲ ರಚನೆಯಾಗಿದೆ. ಇಂದು ಇದರ ಬಗ್ಗೆಯೇ ಕೆಲವರು ಪ್ರಶ್ನೆ ಮಾಡಿದ್ದಾರೆ, ಹಿಂದೂಗಳು ನೈಜ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ, ಭಾರತೀಯರೆಲ್ಲರು ಒಗ್ಗೂಡಬೇಕಾಗಿದೆ ಎಂದರು.
ಮುಸ್ಲಿಂ ಜಮಾತ್‍ಗಳ ಒಕ್ಕೂಟದ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಸೀದಿಗಳನ್ನು ಗುರಿಯಾಗಿಸಿಕೊಂಡು ರಾಜಕರಣ ಮಾಡಲಾಗುತ್ತಿದೆ. ದೇಶದಲ್ಲಿ ಸಮಾಜ ಸಮಾಜಗಳ ನಡುವೆ ಅಶಾಂತಿಯನ್ನು ಭಿತ್ತಿ ರಾಜಕೀಯ ಲಾಭವನ್ನು ಪಡೆಯಲಾಗುತ್ತಿದೆ. ಈ ರೀತಿಯ ಹುನ್ನಾರ ನಮ್ಮ ರಾಜ್ಯದಲ್ಲೂ ಪ್ರಾರಂಭವಾಗಿದೆ ಎಂದು ಆರೋಪಿಸಿದರು.
ಧಾರ್ಮಿಕ ಆಚರಣೆಯ ಸ್ಥಳಗಳ ಸಂರಕ್ಷಣೆಯ ಕಾಯ್ದೆ ಜಾರಿಯಲ್ಲಿದ್ದರು, ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಇದನ್ನು ತಡೆಯುವಲ್ಲಿ ಸರಕಾರ ವಿಫಲವಾಗುತ್ತಿದೆ. ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳಾದ ಮಸೀದಿ, ದರ್ಗಾ, ಮದರಸಗಳನ್ನು ಈ ಕಾಯ್ದೆಯಡಿಯಲ್ಲಿ ರಕ್ಷಿಸಲು ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಕಾನೂನು ಉಲ್ಲಂಘನೆ ಮಾಡಿ ಜಾತ್ಯಾತೀತ ಪರಂಪರೆಗೆ ಧಕ್ಕೆ ತರುವ ಮಾತುಗಳನ್ನಾಡುತ್ತಿದ್ದಾರೆ. 1991ರ ಯಥಾಸ್ಥಿತಿ ಕಾಯ್ದೆಯ ವಿರುದ್ಧದ ನಿರ್ಧಾರಗಳು ಕಂಡು ಬರುತ್ತಿದೆ. 1947 ಆಗಸ್ಟ್ 15ರ ನಂತರದ ಕಾಯ್ದೆಯನ್ವಯ ಪ್ರಾರ್ಥನಾಲಯಗಳ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗಿದೆ. ಜ್ಞಾನ ವ್ಯಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕಲ್ಪಿಸಿರುವುದು ಖಂಡನೀಯ ಎಂದರು.
::: ಬೇಡಿಕೆಗಳು :::
ಸರಕಾರ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಗಳ ಮಿಸಲಾತಿ ಶೇ.4 ರಷ್ಟನ್ನು ಕೈಬಿಡಲಾಗಿದ್ದು, ಅದನ್ನು ಶೇ.8ಕ್ಕೆ ಏರಿಕೆ ಮಾಡಿ ಸದನದಲ್ಲಿ ಜಾರಿಗೆ ತರಬೇಕು. 2024ರ ಮುಂಗಡ ಆಯವ್ಯಯ ಪತ್ರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಕೇಂದ್ರಗಳಿಗೆ 10 ಸಾವಿಕ ಕೋಟಿ ರೂ. ಮಿಸಲಿಡಬೇಕು ಹಾಗೂ ಕುಶಾಲನಗರದಲ್ಲಿ ಇತ್ತೀಚೆಗೆ ಕೊಲೆಯಾದ ಯುವಕ ಸಾಜಿದ್ ಕುಟುಂಬಕ್ಕೆ ಸರ್ಕಾರ ತಕ್ಷಣ ರೂ.10 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ನಜೀರ್ ಅಹ್ಮದ್, ಕಾರ್ಯದರ್ಶಿ ಇಮ್ರಾನ್, ಪ್ರಮುಖರಾದ ಫಯಾಜ್, ಇಸ್ಮಾಯಿಲ್, ಮಡಿಕೇರಿ ನಗರದ ಮಸೀದಿಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*