ಮಡಿಕೇರಿ ಫೆ.15 NEWS DESK : ಜನರ ಬಳಿ ಇರುವ ಪಾರಂಪರಿಕ ಅರಣ್ಯ ವಸ್ತುಗಳನ್ನು ಏಪ್ರಿಲ್ ತಿಂಗಳೊಳಗೆ ಸರ್ಕಾರದ ಅಧೀನಕ್ಕೆ ಒಪ್ಪಿಸಬೇಕು ಎನ್ನುವ ಅರಣ್ಯ ಇಲಾಖೆಯ ಆದೇಶ ಆತಂಕವನ್ನು ಸೃಷ್ಟಿಸಿದ್ದು, ಸರ್ಕಾರ ಈ ವಿಚಾರದಲ್ಲಿ ದುಡುಕದೆ ಜನಪರ ನಿರ್ಧಾರವನ್ನು ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅರಣ್ಯ ಪ್ರಾಣಿಗಳ ಉತ್ಪನ್ನಗಳನ್ನು ಘೋಷಿಸಿಕೊಳ್ಳಬೇಕೆಂಬ ಕಾಯ್ದೆ 2003ರಲ್ಲಿ ಜಾರಿಯಾಗಿರುವ ವಿಚಾರ ಬಹುತೇಕರ ಗಮನಕ್ಕೆ ಬಂದಿರುವುದಿಲ್ಲ. ಈಗ ಏಕಾಏಕಿ ಪಾರಂಪರಿಕ ಅರಣ್ಯ ವಸ್ತುಗಳನ್ನು ಸರಕಾರಕ್ಕೆ ಹಿಂತಿರುಗಿಸಬೇಕೆಂದು ಆದೇಶಿಸಿರುವುದು ಸರಿಯಾದ ಕ್ರಮವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಸರಕಾರ ಜಿಲ್ಲೆಯ ಜನ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಜನಪರ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೊಡಗಿನ ಜನರು ತಮ್ಮದೇ ಆದ ರೀತಿಯಲ್ಲಿ ಹಬ್ಬ ಹರಿದಿನಗಳನ್ನು ತಲೆ- ತಲಾಂತರಗಳಿಂದ ಆಚರಿಸುತ್ತಾ ಬರುತ್ತಿದ್ದು, ಇಲ್ಲಿಯ ಆಚರಣೆಗಳು ವಿಶಿಷ್ಟ ರೀತಿಯದ್ದಾಗಿದೆ. ಪ್ರಮುಖವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಆಚರಿಸುವ ಸುಗ್ಗಿ ಹಬ್ಬ ಪ್ರಕೃತಿಯೊಂದಿಗೆ ರೈತ ಹೊಂದಿರುವ ಅವಿನಾಭಾವ ಸಂಬಂಧದ ಧ್ಯೋತಕವಾಗಿದೆ. ರೈತ ತನ್ನ ಕೃಷಿ ಚಟುವಟಿಕೆಗಳನ್ನು ಮುಗಿಸಿದ ನಂತರ ಸುಗ್ಗಿಹಬ್ಬ ಆಚರಣೆ ನಡೆಯುತ್ತದೆ. ಸುಗ್ಗಿ ಹಬ್ಬಕ್ಕೆ ಮುನ್ನ ಆಯಾ ಊರಿನಲ್ಲಿ ಸಭೆ ನಡೆಸಿ ಸುಗ್ಗಿಹಬ್ಬ ಪ್ರಾರಂಭ ಮತ್ತು ಮುಕ್ತಾಯದ ದಿನಗಳನ್ನು ನಿಗಧಿಪಡಿಸಿ ಘೋಷಣೆ ಮಾಡುತ್ತಾರೆ.
ಬಹಳ ಹಿಂದಿನ ಪದ್ಧತಿಯಂತೆ ಸುಗ್ಗಿ ಘೋಷಣೆಯಾದಾಗಿನಿಂದ ಊರಿನ ಜನರು ಊರಿನ ಹೊರಗೆ ಹೋಗುವಂತಿಲ್ಲ, ಹೋದರೂ ಕತ್ತಲಾಗುವವರೆಗೆ ಊರೊಳಗೆ ಪ್ರವೇಶ ಮಾಡುವಂತ್ತಿಲ್ಲ. ಬಹಳ ವರ್ಷಗಳ ಹಿಂದೆ ಸುಗ್ಗಿಯ ದಿನಗಳಲ್ಲಿ ಪ್ರಾಣಿಗಳ ಸಾಮೂಹಿಕ ಬೇಟೆಯು ನಡೆಯುತ್ತಿತ್ತು. ಈಗ ಬೇಟೆಯಾಡುವ ಸಂಪ್ರದಾಯ ಇರುವುದಿಲ್ಲ. ಅಂದಿನ ದಿನಗಳಲ್ಲಿ ಬೇಟೆಯ ಸಂದರ್ಭ ಸಿಕ್ಕಿದ ಜಿಂಕೆ, ಕಡವೆ ಮತ್ತಿತರ ಪ್ರಾಣಿಗಳ ಕೊಂಬುಗಳನ್ನು ಶೇಖರಿಸಿಡುತ್ತಿದ್ದರು. ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಈಗಲೂ ಸುಗ್ಗಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ಪ್ರಾಣಿ ಬೇಟೆ ಇರುವುದಿಲ್ಲ.
ಕೊನೆಯ ದಿನ ದೇವಸ್ಥಾನಗಳಲ್ಲಿ ಊರಿನವರು ಹಾಗೂ ಬಂಧು ಮಿತ್ರರು ಸೇರಿ ಶೇಖರಿಸಿಟ್ಟಿರುವ ಪ್ರಾಣಿಗಳ ಕೊಂಬುಗಳನ್ನು ಪ್ರದರ್ಶಿಸಿ, ಕುಣಿದು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಪ್ರಾಣಿಗಳ ಕೊಂಬುಗಳು ನೂರಾರು ಸಂಖ್ಯೆಯಲ್ಲಿದ್ದು, ಸುಗ್ಗಿ ಆಚರಣೆಯ ದಿನ ದೇವಾಲಯಗಳಲ್ಲಿ ಪ್ರದರ್ಶನಕ್ಕಿಡುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ.
ಸೋಮವಾರಪೇಟೆ ತಾಲ್ಲೂಕು ಮಾತ್ರವಲ್ಲದೆ ಕೊಡಗು ಜಿಲ್ಲೆಯ ವಿವಿಧೆಡೆ ಧಾರ್ಮಿಕ ಆಚರಣೆ ಮತ್ತು ದೇವರ ಜಾತ್ರೆಗಳೊಂದಿಗೆ ಪ್ರಾಣಿಗಳ ಹಳೆಯ ಕೊಂಬುಗಳು ಭಕ್ತಿಯ ಸ್ಥಾನವನ್ನು ಪಡೆದುಕೊಂಡಿವೆ. ಅಲ್ಲದೆ ಅಜ್ಜ, ಮುತ್ತಜ್ಜರ ಕಾಲದಿಂದಲೂ ಪ್ರತಿ ಮನೆಯಲ್ಲೂ ಪ್ರಾಣಿಗಳ ಕೊಂಬುಗಳನ್ನು ಮನೆಯ ಶೃಂಗಾರಕ್ಕಾಗಿ ಅಳವಡಿಸಿರುವುದನ್ನು ಕೊಡಗಿನ ಬಹುತೇಕ ಮನೆಗಳಲ್ಲಿ ಕಾಣಬಹುದಾಗಿದೆ. ಆದ್ದರಿಂದ ಸರ್ಕಾರ ಪಾರಂಪರಿಕ ಅರಣ್ಯ ವಸ್ತುಗಳ ವಿಚಾರದ ಆದೇಶವನ್ನು ಪುನರ್ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕೆಂದು ಎಸ್.ಎಂ.ಚಂಗಪ್ಪ ಒತ್ತಾಯಿಸಿದ್ದಾರೆ.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*