ಸೋಮವಾರಪೇಟೆ ಫೆ.19 : ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಪಟ್ಟಣ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಶ್ರೀ ಹೊನ್ನಮ್ಮ ಕೆರೆ ದಡದಲ್ಲಿ ರಥಸಪ್ತಮಿ ಅಂಗವಾಗಿ 108 ಸೂರ್ಯ ನಮಸ್ಕಾರ ನಡೆಯಿತು.
ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರ ನೇತೃತ್ವದಲ್ಲಿ ಸಾರ್ವಜನಿಕರು ಸೂರ್ಯನಿಗೆ 108 ಸೂರ್ಯ ನಮಸ್ಕಾರ ಮಾಡಿದರು.
ನಂತರ ಶ್ರೀ ಕ್ಷೇತ್ರ ಹೊನ್ನಮ್ಮನ ದೇವಾಲಯದಲ್ಲಿ ಲಲಿತ ಸಹಸ್ರನಾಮ ನಡೆಯಿತು.
ಈ ಸಂದರ್ಭ ಮಾತನಾಡಿದ ರಾಗಿಣಿ ಅವರು, ಯೋಗ ಮತ್ತು ಧ್ಯಾನದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಪ್ರತಿಯೋರ್ವರು ನಿರಂತರವಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್‍ನ ಮೃತ್ಯುಂಜಯ, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಡಾ. ಸುಪರ್ಣ ಕೃಷ್ಣಾನಂದ್, ಪ್ರಮುಖರಾದ ಕೊಮಾರಪ್ಪ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಳ್ಳಿ ನವೀನ್ ಸೇರಿದಂತೆ ಇತರರು ಇದ್ದರು.









