ಮಡಿಕೇರಿ ಫೆ.19 NEWS DESK : ಸಾಮಾಜಿಕ ಜಾಗೃತಿ ಮೂಡಿಸುವ “ನಂಬಿಕೆ” ಎಂಬ ಕಿರುಚಿತ್ರಕ್ಕೆ ಸಾಧಕ ಕಲಾರತ್ನ ಪ್ರಶಸ್ತಿ ಲಭಿಸಿದೆ.
ನಿಸರ್ಗ ಪ್ರೇರಣ ಟ್ರಸ್ಟ್ ಮತ್ತು ರಾಯಲ್ ಫಿಲಂಸ್ ಇನ್ಸ್ಟಿಟ್ಯೂಟ್ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಿರುಚಿತ್ರ ಅವಾರ್ಡ್-2024 ನಲ್ಲಿ ನಂಬಿಕೆ ಕಿರುಚಿತ್ರದ ನಾಯಕ ನಟ ವಿಶ್ವ ಕುಂಬೂರು ಮತ್ತು ನಿರ್ದೇಶನಕ್ಕಾಗಿ ಗೌತಮ್ ಸೂರ್ಯ ಸಾಧಕ ಕಲಾ ರತ್ನ ಪ್ರಶಸ್ತಿ ಪಡೆದುಕೊಂಡರು.
60 ಕಿರುಚಿತ್ರಗಳ ಪ್ರದರ್ಶನ ನಡೆದಿದ್ದು, ಅಂತಿಮವಾಗಿ 8 ಕಿರುಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದವು. ಅದರಲ್ಲಿ ಎರಡನೇ ಸ್ಥಾನದಲ್ಲಿ ಪ್ರದರ್ಶನ ಕಂಡ ನಂಬಿಕೆ ಕಿರು ಚಿತ್ರವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.








