ವಿರಾಜಪೇಟೆ ಫೆ.19 NEWS DESK : ನ್ಯಾಷನಲ್ ಸ್ಪೋಟ್ರ್ಸ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಜಮ್ಮು ಅಭಿನವ ಥಿಯೇಟರ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಟೀಂ ಇಂಟೋಪೀಸ್ ನೃತ್ಯ ತಂಡದಿಂದ ಸುಮಾರು 27 ಮಕ್ಕಳು ಭಾಗವಹಿಸಿ ಕರ್ನಾಟಕ ರಾಜ್ಯಕ್ಕೆ 9 ಚಿನ್ನ, 5 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದು ಚಾಂಪಿಯನ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.
ನೃತ್ಯ ಫ್ರೀಸ್ಟೈಲ್, ಹಿಪ್ಪೋಪ್, ಜಾನಪದ, ಶಾಸ್ತ್ರೀಯ ನೃತ್ಯ ಸ್ಪರ್ಧೆ ನಡೆದು ರಾಜ್ಯದ ವಿವಿಧ ಭಾಗಗಳಿಂದ ಹಲವಾರು ನೃತ್ಯ ಪಟುಗಳು ಭಾಗವಹಿಸಿದರು.









