ಸೋಮವಾರಪೇಟೆ ಫೆ.20 NEWS DESK : ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲವೆಂದು ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಪಂಚಾಯ್ತಿಯ ಸಾಮಾನ್ಯ ಸಭೆ ಆಡಳಿತಾಧಿಕಾರಿ ತಹಶೀಲ್ದಾರ್ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಖಾತೆ ವರ್ಗಾವಣೆ ಸೇರಿದಂತೆ ಸಾರ್ವಜನಿಕರ ಯಾವುದೇ ಅರ್ಜಿ ವಿಲೇವಾರಿಗೂ ಹಣ ನೀಡಲೇಬೇಕು. ಎರಡೂವರೆ, ಮೂರು ಸೆಂಟ್ ಜಾಗವಿದ್ದರೆ ಹಣ ಪಡೆದು ಅದನ್ನು ಹೆಚ್ಚುವರಿ ದಾಖಲಾತಿ ಮಾಡಿಕೊಡುತ್ತಿದ್ದಾರೆ ಎಂದು ಸದಸ್ಯೆ ಶೀಲಾ ಡಿಸೋಜ ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಜೀವನ್, ಸಾರ್ವಜನಿಕರ ಸಮಸ್ಯೆ ಬಗ್ಗೆ ಸದಸ್ಯರು ಹೇಳಿದರೆ ಇಲ್ಲಿ ಬೆಲೆಯಿಲ್ಲ, ಆದರೆ ಸಾರ್ವಜನಿಕರು ನೇರವಾಗಿ ಬಂದು ಏನಾದರು ಕೊಟ್ಟರೆ ಕೆಲಸವಾಗುತ್ತದೆ ಎಂದು ದೂರಿದರು.
ಇದಕ್ಕೆ ಒಪ್ಪದ ಮುಖ್ಯಾಧಿಕಾರಿ ನಾಚಪ್ಪ ಅವರು ಅನಾವಶ್ಯಕ ಆರೋಪ ಮಾಡಬೇಡಿ, ಇದಕ್ಕೆ ದಾಖಲೆ ಇದ್ದರೆ ಕೊಡಿ, ಇಲ್ಲಾ ಯಾರಾದರೂ ಹಣ ಕೇಳಿದರೆ ನನಗೆ ದೂರು ನೀಡಲು ಹೇಳಿ ಎಂದು ತಿರುಗೇಟು ನೀಡಿದರು.
ವಲ್ಲಭಬಾಯಿ ರಸ್ತೆಯಲ್ಲಿ ನಿವಾಸಿಯೊಬ್ಬರು ಈ ಹಿಂದೆ ನೀರಿನ ಕಂದಾಯ ಪಾವತಿಸಿದ್ದರೂ ಮತ್ತೆ ಬಾಕಿ ಇದೆ ಎಂದು ವಸೂಲಾತಿಗೆ ಹೋಗುತ್ತಿದ್ದಾರೆ. ಅವರ ಬಳಿ ಪಾವತಿ ರಶೀದಿ ಇದ್ದರೂ ಪರಿಗಣಿಸುತ್ತಿಲ್ಲ ಎಂದು ಸದಸ್ಯೆ ಮೋಹಿನಿ ಸಭೆಯ ಗಮನ ಸೆಳೆದರು.
ಕಳೆದ ಸೆ.13ರಲ್ಲಿ ನಡೆದ ಸಭೆಯಲ್ಲಿ ಅಂಗಡಿ ಮಳಿಗೆಗಳ ಹರಾಜು ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರ ಅಭಿಪ್ರಾಯವನ್ನು ತಿರುಚಿ ಬರೆಯಲಾಗಿದೆ. ಆದ್ದರಿಂದ ಆ ನಿರ್ಣಯವನ್ನು ಕೈಬಿಡಬೇಕೆಂದು ಸದಸ್ಯರಾದ ಶುಭಕರ ಹಾಗೂ ಜೀವನ್ ಪ್ರಸ್ತಾಪಿಸಿದರು. ಬಹಳಷ್ಟು ಚರ್ಚೆಯ ನಂತರ ಹಳೆಯ ನಿರ್ಣಯವನ್ನು ಬದಲಾಯಿಸಲು ತೀರ್ಮಾನಿಸಲಾಯಿತು.
ನಗರೋತ್ಥಾನ ಯೋಜನೆಯಡಿ ನಡೆಯಬೇಕಾಗಿದ್ದ ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ಬಗ್ಗೆ ಸರ್ವ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮುಖ್ಯಾಧಿಕಾಕಾರಿ ನಾಚಪ್ಪ ಪ್ರತಿಕ್ರಿಯಿಸಿ ಈಗಾಗಲೇ ಸಂಬಂಧಿಸಿದ ಕಾರ್ಯಪಾಲ ಅಭಿಯಂತರರು ಪರಿಶೀಲನೆ ನಡೆಸಿ ತಕ್ಷಣವೇ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*