ಮಡಿಕೇರಿ ಫೆ.27 NEWS DESK : ಕೊಡಗಿನ ಪ್ರತಿಷ್ಠಿತ ಸಿಐಟಿ ಪೊನ್ನಂಪೇಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಿಟಿಯು ಅಂತರ ಕಾಲೇಜು ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಸಿಐಟಿ ಪೊನ್ನಂಪೇಟೆ ಪುರುಷರ ಹಾಕಿ ತಂಡಕ್ಕೆ ವಿಟಿಯು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ಪಂದ್ಯಾವಳಿಯಲ್ಲಿ ವಿಟಿಯು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ರಾಜ್ಯದ ವಿವಿಧ ಜಿಲ್ಲೆಗಳ 11 ಕಾಲೇಜುಗಳ ಹಾಕಿ ತಂಡಗಳು ಭಾಗವಹಿಸಿದ್ದವು.
ಹಾಜಿ ಪಂದ್ಯಾವಳಿಯ ಫೈನಲ್ ಪಂದ್ಯಾವಳಿಯಲ್ಲಿ ಸಿಐಟಿ ಪೊನ್ನಂಪೇಟೆ ತಂಡ ಮುಂಚೂಣಿ ಆಟಗಾರ ಸಾತ್ವಿಕ್ ಗಳಿಸಿದ ಏಕೈಕ ಗೋಲಿನಿಂದ ಆರ್‍ವಿಸಿಇ ಬೆಂಗಳೂರು ತಂಡವನ್ನು 1-0 ಗೋಲಿನಿಂದ ಮಣಿಸುವುದರ ಮೂಲಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
ಪೈನ್ ಪಂದ್ಯಾವಳಿಗೆ ಮುಖ್ಯಅತಿಥಿಗಳಾಗಿ ಕೊಡವ ಎಜುಕೇಶನ್ ಸೊಸೈಟಿಯ ನಿರ್ದೇಶಕ ಪಟ್ಟಡ ಪೂವಣ್ಣ ಭಾಗವಹಿಸಿದ್ದರು. ವೇದಿಕೆಯಲ್ಲಿ ಕೊಡವ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಕೇಶ್ ಪೂವಯ್ಯ, ಪ್ರಾಂಶುಪಾಲ ಡಾ.ಎಂ. ಬಸವರಾಜು, ಕಾಲೇಜು ಆಡಳಿತಧಿಕಾರಿ ಜೀವನ್ ಚಿಣ್ಣಪ್ಪ ಹಾಗೂ ದೈಹಿಕ ಶಿಕ್ಷಕರಾದ ಹರೀಶ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.