ವಿರಾಜಪೇಟೆ ಫೆ.27 NEWS DESK : ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ “ತಂಬಾಕು ಉತ್ಪನ್ನಗಳ ಸೇವೆಯಿಂದ ಆಗುವ ದುಷ್ಪರಿಣಾಮ”ಗಳ ಕುರಿತು ವಿದ್ಯಾರ್ಥಿಗಳಿಗೆ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಶಾಲೆಯ ಪ್ರಾಥಮಿಕ ವಿಭಾಗದ 6ನೇ ತರಗತಿ ವಿದ್ಯಾರ್ಥಿ ವಿ.ಆರ್ನವ್ ಪ್ರಥಮ, 5ನೇ ತರಗತಿ ವಿದ್ಯಾರ್ಥಿಗಳಾದ ಎಂ.ಡಿ.ದೈವಿಕ್ ದ್ವಿತೀಯ, ಯಶ್ವಿನ್ ತೃತೀಯ ಸ್ಥಾನ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿಗಳಾದ ಜಿ.ಬಿ. ಸ್ಪೂರ್ತಿ ಪೊವಮ್ಮ ಪ್ರಥಮ, ಪಿ. ಬ್ರೀಷ್ ಗಣಪತಿ ದ್ವಿತೀಯ, ಎಸ್. ಎಂ. ಸೋಮಣ್ಣ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎಸ್,ಸುದೇಶ್, ಕಾರ್ಯದರ್ಶಿ ಪಿ.ಎನ್,ವಿನೋದ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಸಂಯೋಜಕಿ ಎನ್. ಬಿ. ಚೈತ್ರ ಹಾಜರಿದ್ದರು.