ಮಡಿಕೇರಿ ಫೆ.27 NEWS DESK : ರಾಜಕೀಯ ಹತ್ಯೆಗಳು ಮತ್ತು ಅಮಾನವೀಯ ಮರಣದಂಡನೆಗಳಿಂದ ಮೃತಪಟ್ಟ ಹಿರಿಯ ಕೊಡವ ಬುಡಕಟ್ಟು ಜನರಿಗೆ ಅಂತರ ರಾಷ್ಟ್ರೀಯ ಮಾತೃಭಾಷಾ ದಿನದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಗೌರವ ಅರ್ಪಿಸಿತು.
ಮಡಿಕೇರಿ ಕೋಟೆ ಆವರಣ ಮತ್ತು ದೇವಟ್ ಪರಂಬು ಕೊಡವ ನರಮೇಧ ಸ್ಮಾರಕ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‍ಸಿ ಪ್ರಮುಖರು, ಕೊಡವ ಪರಂಪರೆ ಮತ್ತು ಕೊಡವರ ಸ್ಥಿತಿ ಸ್ಥಾಪಕತ್ವವನ್ನು ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಮನುಷ್ಯ ಯಾವುದೇ ಕಷ್ಟ ಅಥವಾ ಸು:ಖದಲ್ಲಿದ್ದಾಗ ತನ್ನ ಮಾತೃಭಾಷೆಯ ಮೂಲಕವೇ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಹತ್ಯಾಕಾಂಡಕ್ಕೆ ಗುರಿಯಾದ ಹಿರಿಯ ಕೊಡವ ಜೀವಗಳು ಕೊಡವ ಮಾತೃಭಾಷೆಯ ಮೂಲಕವೇ ತಮ್ಮ ನೋವು ಮತ್ತು ರೋಧನವನ್ನು ಹೊರ ಹಾಕಿ ಪ್ರಾಣ ಬಿಟ್ಟಿದ್ದಾರೆ. ಈ ಜೀವಗಳಿಗೆ ಅಂತರ ರಾಷ್ಟ್ರೀಯ ಮಾತೃಭಾಷಾ ದಿನದಂದು ಗೌರವ ಅರ್ಪಿಸುವುದು ಪ್ರತಿಯೊಬ್ಬ ಕೊಡವರ ಕರ್ತವ್ಯವಾಗಿರುವುದರಿಂದ ಸಿಎನ್‍ಸಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಪ್ರಮುಖರಾದ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಆಲಮಂಡ ಜೈ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಬಾಚರಣಿಯಂಡ ಚಿಪ್ಪಣ್ಣ, ಕಿರಿಯಮಾಡ ಶರಿನ್, ಚಂಬಂಡ ಜನತ್, ನಂದಿನೆರವಂಡ ಅಚ್ಚಯ್ಯ, ಪುಟ್ಟಿಚಂಡ ದೇವಯ್ಯ, ಚೋಳಪಂಡ ನಾಣಯ್ಯ, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಮಣವಟ್ಟಿರ ಸ್ವರೂಪ್, ಅಪ್ಪೇಂಗಡ ಮಾಲೆ ಹಾಗೂ ಕೋಡಿರ ರತನ್ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.









