ಮಡಿಕೇರಿ ಫೆ.27 NEWS DESK : ತೆಕ್ಕಿಲ್ ಪ್ರವಾಸಿ ಒಕ್ಕೂಟದ ವತಿಯಿಂದ ದುಬೈ ನಲ್ಲಿ ನಡೆದ “ಬಂದು ಸೇರಿ ಸಂತೋಷಪಡುವ” ತೆಕ್ಕಿಲ್ ಒಕ್ಕೂಟದ ಸಂಗಮ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ದುಬೈ ಇತ್ತಿಹಾದ್ ಗ್ರೌಂಡಿನಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಯು ಎ ಇ ವಾಸ್ತವ್ಯವಿರುವ ಮತ್ತು ಭಾರತದಿಂದ ಬಂದು ನೆಲೆಸಿರುವ ತೆಕ್ಕಿಲ್ ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರವನ್ನು ಭಾರತದ ಮತ್ತು ಯು ಎ ಇ ರಾಷ್ಟ್ರ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಟಿ.ಎಂ.ಶಾಹಿದ್ ತೆಕ್ಕಿಲ್ ಅವರನ್ನು ಒಕ್ಕೂಟದ ಅಧ್ಯಕ್ಷ ಅಜೀಜ್ ಕೊವ್ವಲ್ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಿದರು.
ನಂತರ ವಿವಿಧ ದೇಶದಲ್ಲಿ ವಾಸ್ತವ್ಯವಿರುವವರ ಸದಸ್ಯರ ಆಚಾರ ವಿಚಾರ ವಿನಿಮಯ, ವಿವಿಧ ರೀತಿಯ ತಿಂಡಿ ತಿನಿಸುಗಳ ರುಚಿ ಸವಿಯುವ , ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಸಭಾ ಕಾರ್ಯಕ್ರಮ, ಸಾಧಕರಿಗೆ ಪ್ರಶಸ್ತಿ ಪ್ರಧಾನ, ಕ್ರೀಡಾಕೂಟಗಳು ನಡೆದವು.
ಭಾರತದಿಂದ ಬಂದ ಮತ್ತು ಯು ಎ ಇ ಯಲ್ಲಿ ವಾಸ್ತವ್ಯವಿರುವ ತೆಕ್ಕಿಲ್ ಒಕ್ಕೂಟದ ಸದಸ್ಯರ ಎಂಟು ತಂಡಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ತೆಕ್ಕಿಲ್ ಚುಂಗ್ ಬ್ರದರ್ಸ್ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದು, ತೆಕ್ಕಿಲ್ ಯು ಕೆ ರಾಯಲ್ಸ್ ತಂಡ ದ್ವಿತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿತು.
ವಿಜೇತ ತಂಡಕ್ಕೆ ಐವತ್ತು ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಯನ್ನು ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷ, ಕೆಪಿಸಿಸಿ ಮುಖ್ಯ ವಕ್ತಾರ ಟಿ.ಎಂ. ಶಾಹಿದ್ ತೆಕ್ಕಿಲ್ ವಿತರಿಸಿದರು.
ಕಾರ್ಯಕ್ರಮದ ಮುಖ್ಯ ಸಂಘಟಕರಾದ ತೆಕ್ಕಿಲ್ ಅಜೀಜ್ ಕೊವ್ವಲ್, ಅಬ್ದುಲ್ ರಹ್ಮಾನ್ ತೆಕ್ಕಿಲ್, ಹಮೀದ್ ಪಟೇಲ್ ತೆಕ್ಕಿಲ್, ಅಜೀಜ್ ಬೆಲಿಂಜಮ್ ತೆಕ್ಕಿಲ್, ಸುಳ್ಯದ ಮತ್ತು ಸಂಪಾಜೆ ,ಅರಂತೋಡು ಗ್ರಾಮದಿಂದ ದುಬೈನಲ್ಲಿ ವಾಸ್ತವ್ಯವಿರುವ ತೆಕ್ಕಿಲ್ ಕುಟುಂಬದ ಪ್ರಮುಖರಾದ ಮೋಹಿಯದ್ದಿನ್ ಜುಮಾ ಮಸ್ಜಿದ್ ಪೇರಡ್ಕ- ಗೂನಡ್ಕ ಅಧ್ಯಕ್ಷ ಹಾಗು ಉದ್ಯಮಿ ರಹೀಮ್ ಪೇರಡ್ಕ, ತೆಕ್ಕಿಲ್ ರಜಾಕ್ ಪೇರಡ್ಕ, ಇಕ್ಬಾಲ್ ಪೇರಡ್ಕ, ಸಮದ್ ಪೇರಡ್ಕ, ಸಿನಾನ್ ಸಂಪಾಜೆ, ರಜಾಕ್ ಗೂನಡ್ಕ, ಆಸೀಫ್ ಇಕ್ಬಾಲ್,ಇಬ್ರಾಹಿಂ ತೆಕ್ಕಿಲ್ ಪೇರಡ್ಕ-ಗೂನಡ್ಕ, ಟಿ.ಎಂ.ತಾಜುದ್ದೀನ್ ತೆಕ್ಕಿಲ್ ಗೂನಡ್ಕ, ಶರೀಫ್ ತೆಕ್ಕಿಲ್ ಗೂನಡ್ಕ, ಟಿ.ಎಂ ಶಾಜ್ ತೆಕ್ಕಿಲ್, ರೇಹಾನ ರಹೀಮ್ ಪೇರಡ್ಕ ಸೇರಿದಂತೆ ಭಾರತದಿಂದ ಮತ್ತು ವಿವಿಧ ರಾಷ್ಟ್ರಗಳಿಂದ ಭಾಗವಹಿಸಿದರು.