ಮಡಿಕೇರಿ ಮಾ.1 NEWS DESK : ಭಾರತೀಯ ಜನತಾ ಪಾರ್ಟಿಯ ಎಸ್‌ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸೋಮವಾರಪೇಟೆಯ ಪಿ.ಕೆ.ಚಂದ್ರು ಹಾಗೂ ವಿರಾಜಪೇಟೆಯ ಚೇತನ್ ಶಿವಪ್ಪ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಗಿದೆ ಎಂದು ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ತಿಳಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಅರೆಕಾಡಿನ ಚೆನ್ನಿಗಯ್ಯ ಹೆಚ್.ಡಿ, ವಿರಾಜಪೇಟೆ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಅಮ್ಮತ್ತಿಯ ಅಭಿಜಿತ್ ಹೆಚ್.ಎ, ಸೋಮವಾರಪೇಟೆ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಜಗನ್ನಾಥ್ ಜಿ. ಚೌಡ್ಲು ಹಾಗೂ ಮಡಿಕೇರಿ ನಗರ ಮಂಡಲ ಅಧ್ಯಕ್ಷರನ್ನಾಗಿ ಮುಕುಂದ ಹೆಚ್.ಜಿ ಅವರುಗಳನ್ನು ನೇಮಕ ಮಾಡಿರುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.










