ಸೋಮವಾರಪೇಟೆ ಮಾ.2 NEWS DESK : ಶಾಂತಳ್ಳಿ ಹೋಬಳಿಯ ತಲ್ತರೆಶೆಟ್ಟಳ್ಳಿ-ಅಭಿಮಠ ಗ್ರಾಮದ ಚೌಡೇಶ್ವರಿ ಯೂತ್ ಕ್ಲಬ್ ವತಿಯಿಂದ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆಯ ಭಾಗ್ಯ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ.
ವಿರಾಜಪೇಟೆಯ ಮಹಿಳಾ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪುರುಷರ ಕಬಡ್ಡಿ ಪ್ರಶಸ್ತಿಯನ್ನು ಬೆಂಗಳೂರಿನ ಕವನ್ ಫ್ರೆಂಡ್ಸ್ ತಂಡ ಪ್ರಥಮ, ನಾರ್ತ್‍ಕೂರ್ಗ್ ತಂಡ ದ್ವಿತೀಯ, ಯಡೂರು ಶ್ರಿರಾಮ ಯುವಕ ಸಂಘ ತೃತೀಯ ಸ್ಥಾನ ಗಳಿಸಿತು.
ಪುರುಷರ ವಾಲಿಬಾಲ್‍ನಲ್ಲಿ ಲೋಕೇಶ್ ಫ್ರೆಂಡ್ಸ್ ದೊಡ್ಡಮಳ್ತೆ ಪ್ರಥಮ, ಸಿದ್ದಲಿಂಗಪುರ ಗೆಳೆಯರ ತಂಡ ದ್ವಿತೀಯ ಸ್ಥಾನ ಪಡೆಯಿತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತ, ಉಪಾಧ್ಯಕ್ಷ ಚಂಗಪ್ಪ, ಚೌಡೇಶ್ವರಿ ಯೂತ್ ಕ್ಲಬ್ ಅಧ್ಯಕ್ಷ ರವಿ, ಪ್ರಮುಖರಾದ ಮುತ್ತಣ್ಣ ಸೇರಿದಂತೆ ಇತರರು ಇದ್ದರು.








