ನಾಪೋಕ್ಲು ಮಾ.4 NEWS DESK : ಅಯ್ಯಂಗೇರಿ ಗ್ರಾಮದ ಚಿನ್ನತಪ್ಪ ಉತ್ಸವಕ್ಕೆ ಚಾಲನೆ ದೊರೆಯಿತು.
ಪ್ರತಿವರ್ಷದಂತೆ ಈ ಬಾರಿಯೂ ಮೂರು ದಿನಗಳ ಕಾಲ ಉತ್ಸವ ಗ್ರಾಮದ ಜನರ ಸಮ್ಮುಖದಲ್ಲಿ ನಡೆಯಲಿದೆ.
ಕೃಷ್ಣನ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆದು ನುಡಿಸಲಾಯಿತು. ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಕೊಳಲು ನಾದ ಆಲಿಸಿದರು.
ಇಂದು ಪಟ್ಟಣಿ ಹಬ್ಬ ನಡೆಯಲಿದ್ದು, ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಣ್ಣೆ, ಹರಕೆ ಸಲ್ಲಿಸುತ್ತಾರೆ.
ನಾಳಿಯಂಡ ಮಾಣಿಯಿಂದ ಎತ್ತುಪೋರಾಟ ಹೊರಟು ಮಂದ್ ನಲ್ಲಿ ಎತ್ತುಪೋರಾಟ, ಶ್ವೇತವಸ್ತ್ರಧರಿಸಿದ ಮಹಿಳೆಯರ ಚೆಂಬುಚೆರ್ಕ್ , ತೆಂಗಿನಕಾಯಿಗೆ ಗುಂಡುಹೊಡೆಯುವುದು ಅನ್ನಸಂತರ್ಪಣೆ ಹಾಗೂ ಹರಕೆ ಸಲ್ಲಿಸುವುದು ಚಿನ್ನತಪ್ಪ ಹಬ್ಬದ ವಿಶೇಷವಾಗಿವೆ.
ವರದಿ : ದುಗ್ಗಳ ಸದಾನಂದ.