ನಾಪೋಕ್ಲು ಮಾ.4 NEWS DESK : ನಾಪೋಕ್ಲು – ಮೂರ್ನಾಡು ಮುಖ್ಯರಸ್ತೆಯ ಸಮೀಪದಲ್ಲೇ ಇರುವ ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಾಲಯ ನೂತನವಾಗಿ ನಿರ್ಮಾಣಗೊಂಡು ಅತ್ಯಾಕರ್ಷಕವಾಗಿ ಕಂಗೊಳಿಸುತ್ತಿದ್ದು, ಪುನರ್ ಪ್ರತಿಷ್ಠಾಪನೆ ಬ್ರಹ್ಮ ಕಳಶೋತ್ಸವದ ಅಂಗವಾಗಿ ಅಂತಿಮ ಹಂತದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ.
ಸುಮಾರು 1.5 ಕೋಟಿ ರೂ.ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದ್ದು, ಇತಿಹಾಸದ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಪಸ್ಸು ಮಾಡಿದ ದೈವಿಕ ತಾಣ ಇದು ಎಂದು ನಂಬಲಾಗಿದೆ. ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ನೆಲೆ ನಿಂತ ತಾಣ ಇದಾಗಿದೆ. ದೇವಾಲಯವನ್ನು ಕಾರ್ಕಳದಿಂದ ತರಲಾದ ಕಲ್ಲಿನಿಂದಲೇ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿ ಆಕರ್ಷಕ ಕುಸುರಿ ಕೆಲಸದೊಂದಿಗೆ ಸಂಪೂರ್ಣವಾಗಿ ನಿರ್ಮಿಸಲಾಗಿರುವುದು ವಿಶೇಷ.
ದೇವ ಮಹಿಮೆ ಜನರ ಮೇಲೆ ಬಂದ ಊರು ಕೊಡವ ಭಾಷೆಯ ಪೊದ್ದು ನಂತರ ಹೊದ್ದೂರು ಎಂದಾಯಿತು ಎಂದು ಹೇಳಲಾಗುತ್ತಿದೆ.
ಮರಕಡ ಶ್ರೀ ಗುರ ಪರಾಶಕ್ತಿ ಮಠದ ಪರಮಪೂಜ್ಯ ನರೇಂದ್ರನಾಥ ಯೋಗೇಶ್ವರ ಮಹಾಸ್ವಾಮಿಯವರ ಪೂರ್ಣ ಅನುಗ್ರಹದೊಂದಿಗೆ ನಿತಿನ್ ನರೇಂದ್ರನಾಥ ಯೋಗೇಶ್ವರ ಸ್ವಾಮಿ ಮತ್ತು ಮಾತೆ ಶಕುಂತಲಾ ಅಮ್ಮನವರ ದಿವ್ಯ ಮಾರ್ಗದರ್ಶನದಲ್ಲಿ ನೂತನವಾಗಿ ಜೀರ್ಣೋದ್ಧಾರ ಗೊಂಡಿದೆ.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚೌರಿರ ಕೆ. ಮೇದಪ್ಪ , ದೇವತಕ್ಕರಾಗಿ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯರಾಗಿರುವ ಮಾಜಿ ಸೈನಿಕ, ನಿವೃತ್ತ ಶಿಕ್ಷಕ ಚೌರಿರ ಉದಯ ಸೇರಿದಂತೆ ಸಮಿತಿ ಸದಸ್ಯರು ಗ್ರಾಮಸ್ಥರು ಕಾರ್ಯನಿರ್ವಹಿಸುತ್ತಿದ್ದ, ಇದೀಗ ದೇವಾಲಯಕ್ಕೆ ಅಳವಡಿಸಿದ್ದ ಶಿಲೆಗಳನ್ನು ಪಾಲಿಶ್, ದೇವಾಲಯದ ಸುತ್ತಲೂ ಇಂಟರ್ಲಾಕ್ ಅಳವಡಿಕೆ, ಗಾರ್ಡನ್ ಪೂರ್ವಭಾವಿ ಸಿದ್ಧತೆತ್ವರಿತವಾಗಿ ಜರುಗುತ್ತಿದ್ದು, ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದೆ.
ದೇವಾಲಯದ ಪುನರ್ ಪ್ರತಿಷ್ಠಾಪನೆ ಬ್ರಹ್ಮ ಕಳಶೋತ್ಸ ಮತ್ತಿತರ ದೈವಿಕ ಕಾರ್ಯಕ್ರಮಗಳು ನೀಲೇಶ್ವರ ಪದ್ಮನಾಭ ತಂತ್ರಿ ಅವರ ಮುಂದಾಲತ್ವದಲ್ಲಿ ಮಾ.7 ರಿಂದ ಆರಂಭಗೊಂಡು ಮಾ.14.ವರೆಗೆ ಒಂದು ವಾರಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಲಿದೆ.
ನಾಲ್ಕು ವರ್ಷಗಳ ಹಿಂದೆ ಗ್ರಾಮದಲ್ಲಿ ಹೊಸ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಜೀರ್ಣೋದ್ಧಾರಗೊಂಡ ದೇವಾಲಯ ಇದೀಗ ಸುಂದರವಾಗಿ ಕಂಗೊಳಿಸುತ್ತಿದೆ. ಈಗಾಗಲೇ ಸುಮಾರು 1.5 ಕೋಟಿ ರೂ. ವೆಚ್ಚವಾಗಿದೆ ಇನ್ನೂ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ .ಅಂದಾಜು 30 ಲಕ್ಷ ರೂ. ಅವಶ್ಯಕತೆ ಇದ್ದು, ನಿರೀಕ್ಷಿಸಲಾಗಿದೆ. ಚೌರಿರ ಕೆ. ಮೇದಪ್ಪ :: ಅಧ್ಯಕ್ಷರು ದೇವಾಲಯ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ
ಹೊದ್ದೂರು ಗ್ರಾಮದಲ್ಲಿ 5 ದೇವಾಲಯಗಳಿದ್ದು, ಅವುಗಳಲ್ಲಿ ಭಗವತಿ ದೇವಾಲಯವು ಒಂದು. ಇದು ಗ್ರಾಮ ದೇವಾಲಯವಾಗಿದ್ದು, ಶಿಥಿಲಗೊಂಡ ಕಾರಣ ದೇವಾಲಯದ ಪುನರ್ ನಿರ್ಮಾಣಕ್ಕೆ ಗ್ರಾಮಸ್ಥರು ನಿರ್ಧರಿಸಿ 2013ರಲ್ಲಿ ಜ್ಯೋತಿಷಿ ಮೂಲಕ ತಿಳಿದುಬಂದಂತೆ ಚೌಟ್ ಪೂಜೆ ಮಾಡುವುದರ ಮೂಲಕ ಪ್ರಾರಂಭವಾಗಿ ಚಾಲನೆ ನೀಡಲಾಯಿತು .
2017 ರಲ್ಲಿ ಸ್ವರ್ಣ ಪ್ರಶ್ನೆ ಇಟ್ಟು ಆ ಮೂಲಕ ಜೀರ್ಣೋದ್ಧಾರ ಅಧಿಕೃತವಾಗಿ ಚಾಲನೆ ನೀಡಿ ದೇವರ ಅನುಗ್ರಹದಿಂದ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದೆ :: ನೆರವಂಡ ಸಂಜಯ್ ಪೂಣಚ್ಚ :: ದೇವತಕ್ಕ ಮುಖ್ಯಸ್ಥರು , ಸಮಿತಿ ಕಾರ್ಯದರ್ಶಿ
ಹೊದ್ದೂರು ಗ್ರಾಮದ ಭಗವತಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಹಲವಾರು ಬಾರಿ ಜೀರ್ಣದೋರಗೊಂಡಿದೆ. 2017 ರಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಆಗಬೇಕು ಎಂದು ಗ್ರಾಮಸ್ಥರು ನಿರ್ಧರಿಸಿ ಮರಕಡ ಶ್ರೀ ಗುರ ಪರಾಶಕ್ತಿ ಮಠದ ಪರಮಪೂಜ್ಯ ನರೇಂದ್ರನಾಥ ಯೋಗೇಶ್ವರ ಮಹಾಸ್ವಾಮಿಯವರ ಮಾರ್ಗದರ್ಶನದಲ್ಲಿ ನೂತನ ದೇವಾಲಯದ ನಿರ್ಮಾಣ ಕೈಗೊಂಡರು.
ಗರ್ಭಗುಡಿ ಶಾಸ್ತ್ರೋತ್ರವಾಗಿ ನಿರ್ಮಾಣಗೊಂಡು ಷಡಧಾರ ಪ್ರತಿಷ್ಠೆ 9 ಅಡಿ ಆಳದಿಂದ ಆಗಿದೆ. ಇತಿಹಾಸದ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಪಸ್ಸು ಮಾಡಿದ ದೈವಿಕ ತಾಣ ಇದು ಎಂದು ನಂಬಲಾಗಿದೆ. ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ನೆಲೆ ನಿಂತ ತಾಣ ಇದಾಗಿದೆ. ಭಕ್ತಾದಿಗಳ ಸಹಕಾರದಿಂದ ಜನರ ಶ್ರೇಯೋಭಿವೃದ್ಧಿಗಾಗಿ ದೇವಾಲಯ ನಿರ್ಮಾಣಗೊಂಡಿದೆ. :: ಚೌರಿರ ಉದಯ :: ಮಾಜಿ ಸೈನಿಕರು, ನಿವೃತ್ತ ಶಿಕ್ಷಕ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯ
ವರದಿ : ದುಗ್ಗಳ ಸದಾನಂದ