ಮಡಿಕೇರಿ ಮಾ.5 NEWS DESK : ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಸುಂಟಿಕೊಪ್ಪದ ಎಸ್ ಎಸ್ ಇಂಟರ್ ನ್ಯಾಷನಲ್ ಕನ್ವೆನ್ಷನ್ ಹಾಲ್ ನಲ್ಲಿ 8 ಜೋಡಿ ಮುಸ್ಲಿಂ ಬಡ ಕನ್ಯೆಯರ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.
ಸಮುದಾಯದ ಧರ್ಮ ಗುರು ಸೈಯದ್ ಕೆ ಎಸ್ ಮುಕ್ತಾರ್ ತಂಙಳ್ ಕುಂಬೋಲ್ ಅವರು ನಿಖಾಹ್ನ ನೇತೃತ್ವ ವಹಿಸಿದ್ದರು. ಜಿಲ್ಲೆಯ ಮುಸ್ಲಿಂ ಮುಂದಾಳು ಹಾಜಿ ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು .ವಧುವಿಗೆ ಐದು ಪವನ್ ಚಿನ್ನಾಭರಣ ವಧೂ ವರರಿಗೆ ಹೊಸ ಉಡುಪು ಹಾಗೂ ನೆರೆದ ಸಾರ್ವಜನಿಕರಿಗೆ ಮಧ್ಯಾಹ್ನದ ಭೋಜನ ನೀಡುವ ಮೂಲಕ ಅಲ್‍ಮೀನ್ ನ ಕಾರ್ಯಕರ್ತರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಎಸ್ ಎಸ್ ಕಲ್ಯಾಣ ಮಂಟಪದ ಮಾಲಿಕ ಎಂ.ಎಂ.ಸಾಹೀರ್ ಮಾತನಾಡಿ, ಮುಂದಿನ ದಿನಗಳಲ್ಲಿಯೂ ಬಡವರ ಸಾಮೂಹಿಕ ವಿವಾಹಕ್ಕಾಗಿ ಕಲ್ಯಾಣ ಮಂಟಪವನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದರು.
ಸಮಿತಿಯ ಕೋಶಾಧಿಕಾರಿ ಅಬ್ದುಲ್ ಲತೀಫ್ ಹಾಜಿ ಮಾತನಾಡಿ, ಬಡ ಕನ್ಯೆರ ವಿವಾಹರ್ಥ ಜಿಲ್ಲೆಯಾದ್ಯಂತ ಕೊಡುಗೈ ದಾನಿಗಳ ಮನೆಗಳಿಗೆ ತೆರಳಿದಾಗ ಉತ್ತಮ ಪ್ರತಿಕ್ರಿಯೆ ದೊರೆತುದರ ಫಲವಾಗಿ ಈ ಸಮಾರಂಭ ಆಯೋಜಿಸಲು ಸಾಧ್ಯವಾಯಿತು ಎಂದು ಹೇಳಿದರು.
ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಎಂ.ಇ.ಮಹಮ್ಮದ್ ಸಮಾರಂಭದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಅಲ್‍ಮೀನ್ ಸಮಿತಿಯ ಅಧ್ಯಕ್ಷ ಬಿ.ಹೆಚ್.ಅಹಮದ್ ಹಾಜಿ, ಪೆರಂಬಾಡಿ ಅಧ್ಯಕ್ಷರು ಶಂಶುಲ್ ಉಲಮಾ, ಎಜುಕೇಶನಲ್ ಟ್ರಸ್ಟ್ ಸಿ.ಪಿ.ಎಂ.ಬಶೀರ್ ಹಾಜಿ, ಕೊಡಗು ಜಿಲ್ಲೆ ನಾಯಿಬ್ ಖಾಝಿ ಬಹು ಅಬ್ದುಲ್ಲಾ ಫೈಝಿ, ಸುಂಟಿಕೊಪ್ಪ ಮುದ್ರರೀಸ್ ಸುನ್ನಿ ಮುಸ್ಲಿಂ ಜಮಾಅತ್ ಉಸ್ಮಾನ್ ಫೈಝಿ, ಗದ್ದೆಹಳ್ಳ ನೂರ್ ಜುಮಾ ಮಸೀದಿ ಖತೀಬರ್ ಉಸಾಮಾ ಸಖಾಫಿ, ಕೊಡಗರಹಳ್ಳಿ ಬಾಪು ಹಾಜಿ ಹಾಜರಿದ್ದರು.