ವಿರಾಜಪೇಟೆ ಮಾ.5 NEWS DESK : ವಿರಾಜಪೇಟೆಯ ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ಸ್ ಮತ್ತು ಮುದ್ರಣಾಲಯ ನಿಯಮಿತ ಸಂಸ್ಥೆಯ ಶತಮಾನೋತ್ಸವ ಸಮಾರಂಭ ಮಾ.10 ರಂದು ವಿರಾಜಪೇಟೆಯಲ್ಲಿ ನಡೆಯಲಿದೆ ಎಂದು ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ಸ್ ಮತ್ತು ಮುದ್ರಣಾಲಯ ನಿಯಮಿತದ ಅಧ್ಯಕ್ಷ ಮಾಣಿಯಪಂಡ ರೋಹಿತ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪೂರ್ವಾಹ್ನ 1ಒ.30 ಗಂಟೆಗೆ ವಿರಾಜಪೇಟೆ ಕೊಡವ ಸಮಾಜದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
1918ರಲ್ಲಿ ಕೇವಲ 50 ಶಿಕ್ಷಕ ಸದಸ್ಯರನ್ನು ಒಳಗೊಂಡು ಸ್ಥಾಪನೆಯಾದ ಸಂಸ್ಥೆ 1920ರಲ್ಲಿ ಸಹಕಾರ ಕಾನೂನು ರೀತಿಯಲ್ಲಿ ನೊಂದಾವಣಿ ಮಾಡಲಾಯಿತು. ನಷ್ಟದ ಹಾದಿಯಲ್ಲಿದ್ದ ಸಂಘವನ್ನು ವಿರಾಜಪೇಟೆಗೆ ಸ್ಥಳಾಂತರಿಸಿ 1948ರಲ್ಲಿ ವಿರಾಜಪೇಟೆಯ ಹೃದಯ ಭಾಗದಲ್ಲಿ 39 ಸೆಂಟ್ ಜಾಗ ಖರೀದಿಸಿ ಸಂಘವನ್ನು ಪುನಶ್ಚೇತನ ಗೊಳಿಸಲಾಯಿತು. ಇದೀಗ 1770 ಸದಸ್ಯ ಬಲವನ್ನು ಹೊಂದಿದ್ದು ಶಿಕ್ಷಕರು ಮಾತ್ರ ಸದಸ್ಯತ್ವ ಹೊಂದುವ ಅವಕಾಶ ಇದೆ. ಪ್ರಸ್ತತ ಸಂಘವು ಒಟ್ಟು ರೂ 4,37,815.00 ಸದಸ್ಯರ ಪಾಲು ಬಂಡಲಾಳ ಮತ್ತು ಸರ್ಕಾರದ ಪಾಲು ಬಂಡವಾಳ 1,33,500.00 ಇರುತ್ತದೆ. ಸಂಘವು 2022-23 ರಲ್ಲಿ ಒಟ್ಟು ರೂ 4,61,71,566.00 ರೂಗಳ ವಹಿವಾಟು ಮಾಡಲಾಗಿದೆ. ಸದಸ್ಯರಿಂದ 2 ಕೋಟಿಯಷ್ಟು ನಿರಖು ಠೇವಣಿಯನ್ನು ಖರೀದಿಸಿದ್ದು, ಸದಸ್ಯರಿಗೆ 2 ಕೋಟಿಗು ಅಧಿಕ ಜಾಮೀನು ಸಾಲವಾಗಿ ನೀಡಲಾಗಿದೆ. ಸಂಘದ ಮುದ್ರಣಾಲಯವು ಜಿಲ್ಲೆಯಲ್ಲಿ ಏಕೈಕ ಸರ್ಕಾರಿ ಮುದ್ರಣಾಲಯವಾಗಿದ್ದು, ಅತ್ಯಾಧುನಿಕ ಆಪ್ಸೆಟ್ ಪ್ರಿಂಟರರನ್ನು ಒಳಗೊಂಡ ಕಲರ್ ಜೆರಾಕ್ಸ್ ಯಂತ್ರವನ್ನು ಹೊಂದಿದ್ದು, ಸಮಯಕ್ಕೆ ಸರಿಯಾದ ಪ್ರತಿಗಳನ್ನು ಅಚ್ಚುಕಟ್ಟಾಗಿ ಮಾಡಿ ಕೊಡಲಾಗುತ್ತದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಎ.ವಿ.ಮಂಜುನಾಥ್ ಮಾತನಾಡಿ, ಮಾರ್ಚ್ 10 ರಂದು ಸಂಘದ ಅಧ್ಯಕ್ಷ ಮಾನಿಯಪಂಡ ರೋಹಿತ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜಿಕ್ಕುಟ್ಟಿರ ಎಸ್.ಪೊನ್ನಣ್ಣ, ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗು-ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರುಗಳಾದ ಮಂಡೇಪಂಡ ಸುಜಾ ಕುಶಾಲಪ್ಪ, ಎಸ್.ಎಲ್.ಬೋಜೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಸಹಕಾರ ಸಂಘಗಳ ಉಪ ನಿಬಂಧಕ ಎಂ.ಎಸ್.ಕೃಷ್ಣಪ್ರಸಾದ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಈ.ಮೋಹನ್ ಉಪಸ್ಥಿತಲಿರುವರು ಎಂದು ಹೇಳಿದರು.
ನಿರ್ದೇಶಕ ಚೊಟ್ಟೆಯಾಂಡಮಾಡ ಬೋಸ್ ವಿಶ್ವನಾಥ್ ಮಾತನಾಡಿ, ಸಂಘ ಸ್ಥಾಪನೆಗೊಂಡು 100 ವಸಂತಗಳಲ್ಲಿ 33 ಅಧ್ಯಕ್ಷರುಗಳನ್ನು ಕಂಡಿದೆ. ಇದೇ ಸಂದರ್ಭದಲ್ಲಿ ಅವರುಗಳನ್ನು ಗೌರವಿಸಲಾಗುವುದು. ಅಲ್ಲದೆ ಸಂಘದಲ್ಲಿ 90 ವಯೋಮಿತಿಯ 12 ಸದಸ್ಯರಿದ್ದು ಅವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಮೇರಿಯಂಡ ಮುದ್ದಮ್ಮ, ಜಯೇಂದ್ರ, ಹೆಚ್.ಜಿ ಸೀತಾ, ಆಂತರಿಕ ಲೆಕ್ಕ ಪರಿಶೋಧಕ ಕೋಟೆರ ರಘು ಕಾರ್ಯಪ್ಪ ಉಪಸ್ಥಿತರಿದ್ದರು.
Breaking News
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*
- *ಕಬ್ಬಚ್ಚಿರ ರಶ್ಮಿ ಕಾರ್ಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ*
- *ಬೋಯಿಕೆರಿ ಅಂಗನವಾಡಿಯಲ್ಲಿ ನಿವೃತ್ತ ಕಾರ್ಯಕರ್ತೆಯರಿಗೆ ಬೀಳ್ಕೊಡುಗೆ : ಸಂಸ್ಕಾರವಂತ ಸಮಾಜ ನಿರ್ಮಾಣದ ರೂವಾರಿಗಳು ಅಂಗನವಾಡಿ ತಾಯಂದಿರು : ತೆನ್ನಿರ ಮೈನಾ ಶ್ಲಾಘನೆ*
- *ವ್ಯಾoಡಮ್ ಎಂಟರ್ಪ್ರೈಸಸ್ ನ ವಾರ್ಷಿಕೋತ್ಸವ : ನ.24 ರಂದು ಲಕ್ಕಿ ಡ್ರಾ ಸಮಾರಂಭ*
- *ಮಾದರಿ ವಿಶೇಷಚೇತನರ ಸ್ವ ಸಹಾಯ ಸಂಘ ಹಾಗೂ ಮಾದರಿ ಗ್ರಾಮ/ ಪಟ್ಟಣ ಪಂಚಾಯತ್ ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಹೊಸ್ಕೇರಿಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ*
- *ಕೊಡಗು : ಸಹಕಾರ ಸಂಘಗಳ ಸುಸ್ಥಿರತೆಗೆ ಎಲ್ಲರೂ ಶ್ರಮಿಸಿ : ಕೆ.ಎನ್.ರಾಜಣ್ಣ ಸಲಹೆ*
- *ಮಡಿಕೇರಿಯಲ್ಲಿ ಪೌರಕಾರ್ಮಿಕರ ದಿನಾಚರಣೆ : ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ : ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*