ಮಡಿಕೇರಿ ಮಾ.5 NEWS DESK : “ಜಾಗೃತಿ ಕಿರಣ” ಕನ್ನಡ ಪಾಕ್ಷಿಕ ಪತ್ರಿಕೆಯ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಮಡಿಕೇರಿ ತಾಲ್ಲೂಕಿನ ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಕುಶನ್ ಬಿ.ಎಸ್, ಉಪಾಧ್ಯಕ್ಷೆ ದಿವ್ಯ ರೇಖಾ ಬಿ.ಎಸ್ ಹಾಗೂ ಅಭಿವೃದ್ಧಿ ಅಧಿಕಾರಿ ಕೆ.ಎಂ.ಚಂದ್ರಮೌಳಿ ಅವರುಗಳಿಗೆ ರಾಜ್ಯ ಮಟ್ಟದ “ಗ್ರಾಮ ಮಿತ್ರ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ನಡೆದ ಪತ್ರಿಕೆಯ ದಶಮಾನೋತ್ಸವ ಸಮಾರಂಭದಲ್ಲಿ ಸ್ಥಳೀಯ ಶಾಸಕ ಭರತ್ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯದ ವಿವಿಧ ಗ್ರಾ.ಪಂ ಮಟ್ಟದಲ್ಲಿ ದಕ್ಷತೆ ಮತ್ತು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವವರನ್ನು ಗುರುತಿಸಿ “ಗ್ರಾಮ ಮಿತ್ರ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು “ಜಾಗೃತಿ ಕಿರಣ” ಪತ್ರಿಕೆಯ ಪ್ರಧಾನ ಸಂಪಾದಕ ಯಾಳ್ಪಿ ವಲಿಭಾಷ ಇದೇ ಸಂದರ್ಭ ತಿಳಿಸಿದರು.









