ಮಡಿಕೇರಿ ಮಾ.5 NEWS DESK : ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟ ಗಾಳಿಬೀಡು ಗ್ರಾಮದ ಅಪ್ಪಚ್ಚು (60) ಅವರ ಮನೆಗೆ ಶಾಸಕ ಡಾ.ಮಂತರ್ ಗೌಡ ಅವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಶಾಸಕರು ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಗ್ರಾಮಸ್ಥರು ದಾಳಿ ಮಾಡಿದ ಕಾಡಾನೆಯನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು. ವನ್ಯಜೀವಿ ಹಾವಳಿಯಿಂದ ರಕ್ಷಣೆಯನ್ನು ನೀಡಬೇಕು, ರಸ್ತೆಯುದ್ದಕ್ಕೂ ಸೋಲಾರ್ ದೀಪವನ್ನು ಅಳವಡಿಸಬೇಕು, ಮೃತರ ಮನೆಗೆ ವಿದ್ಯುತ್ ಸಂಪರ್ಕವನ್ನು ಒದಗಿಸಬೇಕೆಂದು ಮನವಿ ಮಾಡಿದರು. ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕರು ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.









