ಮಡಿಕೇರಿ ಮಾ.6 NEWS DESK : ಕರ್ನಾಟಕ ರಾಜ್ಯ ಅಬಕಾರಿ ಆಯುಕ್ತರು, ಬೆಂಗಳೂರು ಮತ್ತು ಮಂಗಳೂರು ಅಬಕಾರಿ ಜಂಟಿ ಆಯುಕ್ತರು ವಿಭಾಗದ ಅವರ ನಿರ್ದೇಶನದಂತೆ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಕೊಡಗು ಜಿಲ್ಲೆಯಲ್ಲಿ ಜಿಲ್ಲೆಯಾದ್ಯಂತ ಕಳ್ಳಭಟ್ಟಿ, ಸೇಂದಿ, ಬೆಲ್ಲದ ಕೊಳೆ ಸೇರಿದಂತೆ ಅಕ್ರಮ ಮದ್ಯ ಮಾರಾಟ ಸಂಬಂಧಿತ ಹಾಗೂ ಗಾಂಜ, ಡ್ರಗ್ಸ್, ಅಫೀಮ್ ಸೇರಿದಂತೆ ಮಾದಕ ವಸ್ತುಗಳ ಸೇವನೆ, ಮಾರಾಟ ನಿಯಂತ್ರಿಸುವ ಸಂಬಂಧ 24*7 ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಹಕರಿಸುವಂತೆ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ಜಿಲ್ಲಾ ನಿಯಂತ್ರಣ ಕಂಟ್ರೋಲ್ ರೂಂ, ಕೊಡಗು ಜಿಲ್ಲೆ ಮಡಿಕೇರಿ ದೂ.ಸಂ.08272-229110, ಮಡಿಕೇರಿ ತಾಲ್ಲೂಕು ಕಂಟ್ರೋಲ್ ರೂಂ. 08272-223368(ವಲಯ ಕಚೇರಿ), 08272-224773 (ಉಪ ವಿಭಾಗ ಕಚೇರಿ), ಸೋಮವಾರಪೇಟೆ ತಾಲ್ಲೂಕು ಕಂಟ್ರೋಲ್ ರೂಂ ದೂ.ಸಂ. 08276-281729(ವಲಯ ಕಚೇರಿ), 08276-281730/200609(ಉಪವಿಭಾಗ ಕಚೇರಿ), ವಿರಾಜಪೇಟೆ ತಾಲ್ಲೂಕು ಕಂಟ್ರೋಲ್ ರೂಂ ದೂ.ಸಂ.08274-255720(ವಲಯ ಕಚೇರಿ), 08274-256396( ಉಪವಿಭಾಗ ಕಚೇರಿ) ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.









