ಮಡಿಕೇರಿ ಮಾ.6 NEWS DESK : ದಕ್ಷಿಣ ವಲಯದ DIGP ಅಮಿತ್ ಸಿಂಗ್, ಐಪಿಎಸ್ ಆವರ ನೇತೃತ್ವದಲ್ಲಿ ಕಕರ್ನಾಟಕ-ಕೇರಳ ಅಂತರ್ ರಾಜ್ಯ ಗಡಿ ಸಮನ್ವಯ ಸಭೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆಯಿತು. DIGP, Kannur, DIGP ATS, Wayanad, Kannur, Kasaragodu ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಕೇರಳ ರಾಜ್ಯದ SOG ಪೊಲೀಸ್ ವರಿಷ್ಠಾಧಿಕಾರಿ, ದಕ್ಷಿಣ ಕನ್ನಡ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ Karkala ANF ಮತ್ತು ISD ವಿಭಾಗ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿಗಳು, ಮಂಗಳೂರು ನಗರದ Crime & Traffic DCP ಹಾಗೂ ASP Iritty ಅವರುಗಳು ಭಾಗಿಯಾಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರು.











