ಗೋಣಿಕೊಪ್ಪ ಮಾ.10 NEWS DESK : ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಮೂಲಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪತ್ರಕರ್ತ ಜಗದೀಶ್ ಜೋಡುಬೀಟಿ ತಿಳಿಸಿದ್ದಾರೆ. ಹಳ್ಳಿಗಟ್ಟು ಹುದೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಿಐಟಿ ಕಾಲೇಜ್‍ನ, ರಾಷ್ಟ್ರೀಯ ಸ್ವಯಂ ಯೋಜನಾ ಘಟಕದ ವಾರ್ಷಿಕ ಶಿಬಿರದ ಸಮರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಬದುಕಿನಲ್ಲಿ ಸಮಸ್ಯೆಗಳು ಎದುರಾಗಿದೆ ಎಂದು ಆತ್ಮಹತ್ಯೆಗೆ ಶರಣಾಗುವುದು ಹೇಡಿತನದ ನಡೆಯಾಗಿದೆ. ಶಿಕ್ಷಣದ ಮೌಲ್ಯಗಳನ್ನು ಅರಿತು ಸಾಮಾಜಿಕ ಕಳಕಳಿಯೊಂದಿಗೆ, ಸಾಮಾಜಿಕ ಬಾಂಧವ್ಯ ಮತ್ತು ಮನುಜ ಪ್ರೀತಿಯೊಂದಿಗೆ ಬದುಕನ್ನು ನಡೆಸಿದಾಗ ಜೀವನ ಸಂಭ್ರಮ ಮತ್ತು ಉತ್ಸಾಹದಿಂದ ಕೂಡಿರಲು ಸಾಧ್ಯವಾಗಬಲ್ಲದು ಎಂದು ಕಿವಿಮಾತು ಹೇಳಿದರು. ಬದಲಾಗಿ ಕಾಲೇಜಿನ ಆವರಣದೊಳಗಿನ ಶಿಕ್ಷಣದ ಜತೆಗೆ ಸಮಾಜದಲ್ಲಿ ಪ್ರತ್ಯಕ್ಷವಾಗುವ ಹಲವಾರು ಘಟನೆಗಳಿಂದ ಅನುಭವ ಪಡೆದು ಬದುಕನ್ನು ಸಂಭ್ರಮಿಸಬಹುದಾಗಿದೆ ಎಂದರು. ಮನುಷ್ಯ ಈ ಬದುಕಿಗಾಗಿ ನೂರಾರು ರೀತಿಯ ಹೋರಾಟಗಳನ್ನ ಮತ್ತು ಸಾಹಸಗಳನ್ನು ನಡೆಸುತ್ತಾನೆ. ಇಂತಹ ಸಾಹಸಿಗರ ಯಶೋಗಾಥೆಗಳನ್ನ ತಿಳಿದುಕೊಳ್ಳುವ ಮೂಲಕ ನಮ್ಮ ಜೀವನವನ್ನು ಸೌಂದರ್ಯವಾಗಿಸಿಕೊಳ್ಳಲು ಸಾಧ್ಯವಾಗಬಲ್ಲದು. ಮನಸ್ಸಿನ ಮೇಲಿನ ನಿಯಂತ್ರಣದಿಂದ ಬದುಕಿನ ಹಾದಿಯ ನಡೆಯಲ್ಲಿ ಉಂಟಾಗುವ ವ್ಯತ್ಯಾಸವನ್ನು ನಿಯಂತ್ರಿಸಬಹುದಾಗಿದೆ. ಇಂತಹ ಕಟ್ಟುನಟ್ಟಿನ ಬಂಗಾರದಂತ ಬದುಕನ್ನು ಸವಿಯಲು ಸಮಯ ಪಾಲನೆ ಮತ್ತು ಶಿಸ್ತು ಅಳವಡಿಸಿಕೊಳ್ಳುವುದರ ಜೊತೆಗೆ ವ್ಯಕ್ತಿತ್ವ ವಿಕಾಸನಕ್ಕೆ ಪ್ರೇರಣೆಯಾಗುವ ಓದಿನಿಂದ ಸಾಧ್ಯವಾಗಬಲ್ಲದು ಎಂದು ಸಲಹೆ ನೀಡಿದರು. ಅರುವತ್ತೊಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಶರೀಫಬಿವಿ ಮಾತನಾಡಿ ಮಕ್ಕಳು ಶಿಕ್ಷಣವಂತರಾಗುವುದರ ಜೊತೆಗೆ ಈ ಸಮಾಜಕ್ಕೆ ಅಮೂಲ್ಯವಾದ ಕೊಡುಗೆಯನ್ನ ನೀಡುವ ಬಗೆ ಗಮನಹರಿಸಬೇಕು ಎಂದು ಹೇಳಿದರು. ಸಿಐಟಿ ಕಾಲೇಜು ಕಾರ್ಯದರ್ಶಿ ರಾಕೇಶ್ ಪೂವಯ್ಯ ಮಾತನಾಡಿ, ಎನ್‍ಎಸ್‍ಎಸ್ ಶಿಬಿರದಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಶಿಸ್ತು ಮತ್ತು ಸಮಾಜದ ಮೌಲ್ಯವನ್ನು ಅರಿತುಕೊಳ್ಳಲು ಸಾಧ್ಯವಿದೆ ಈ ಉದ್ದೇಶದೊಂದಿಗೆ ಶಿರಾರ್ಥಿಗಳು ತಮ್ಮನ್ನು ತಾವು ಸೇವಾ ಮನೋಭಾವದಿಂದ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಾಗ ಈ ಸಮಾಜ ಕಟ್ಟುವ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ಹೇಳಿದರು. ಹುದೂರು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೈ ಕಾವೇರಿ ಮಾತನಾಡಿ, ಶಿಬಿರದಿಂದ ಸೇವಾ ಮನೋಭಾವನೆಯನ್ನು ಬಳಸಿಕೊಳ್ಳಲು ಸಾಧ್ಯವಾಗಬಲ್ಲದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲ, ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಈ ಸಮಾಜಕ್ಕೆ ಮಾದರಿಯಾಗಿ ಬದುಕುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಎನ್.ಎಸ್.ಎಸ್ ಶಿಬಿರಗಳು ಸಹಕಾರಿಯಾಗಿದ್ದು ಇಂತಹ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎನ್ ಎಸ್.ಎಸ್ ಯೋಜನಾಧಿಕಾರಿ ಪವನ್‍ಕುಮಾರ್ ಹಾಗೂ ಶಿಬಿರಾರ್ಥಿಗಳು, ಶಾಲೆಯ ಶಿಕ್ಷಕರು ಇದ್ದರು.
Breaking News
- *ಮೇಕೇರಿ ಪ್ರೀಮಿಯರ್ ಲೀಗ್ ಸೀಸನ್-5 : ಕ್ರೀಡೆಯಿಂದ ದೈಹಿಕ, ಮಾನಸಿಕ ಸಧೃಡತೆ ಸಾಧ್ಯ : ಶಾಸಕ ಎ.ಎಸ್.ಪೊನ್ನಣ್ಣ*
- *ಭಾಗಮಂಡಲ : ಎಲ್ಲಾ ಜಾತಿ, ಧರ್ಮ, ಭಾಷೆಗಳಿರುವ ನಾಡಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಯಾವುದೇ ಕಾರಣಕ್ಕೂ ಧ್ವೇಷ ಮಾಡಬಾರದು : ಸಿಎಂ*
- *ರೂ.1.50 ಕೋಟಿ ಅನುದಾನ ಬಿಡುಗಡೆಗೆ ಸಿಎಂ ಗೆ ಮನವಿ ಸಲ್ಲಿಸಿದ ಮುದ್ದಂಡ ಹಾಕಿ ಉತ್ಸವ ಸಮಿತಿ*
- *ಅರ್ಚಕರ ಮೇಲೆ ಹಲ್ಲೆ : ಹೋರಾಟದ ಎಚ್ಚರಿಕೆ ನೀಡಿದ ವಿಶ್ವ ಹಿಂದು ಪರಿಷತ್ ಮಠ-ಮಂದಿರ್ ಘಟಕ*
- *ಫೆ.7 ರ ಪಾದಯಾತ್ರೆಗೆ ಸಿಎನ್ಸಿ ಬೆಂಬಲ*
- *ಕೊಡಗು : ಕಾರ್ಮಿಕರ ಸಾಮಾಜಿಕ ಭದ್ರತಾ ಕುರಿತು ಜನಜಾಗೃತಿ : ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ*
- *ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್ಸೈಟ್ ಬಿಡುಗಡೆ*
- *ಕೊಡಗಿಗೆ ಸಚಿವ ಸ್ಥಾನ ನೀಡಲು ಒತ್ತಾಯ*
- *ಮರಗೋಡಿನಲ್ಲಿ ಗೌಡ ಕುಟುಂಬಗಳ ಟೆನ್ನಿಸ್ ಬಾಲ್ ಕ್ರಿಕೆಟ್*
- *ತಲಕಾವೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ*