ಸೋಮವಾರಪೇಟೆ ಮಾ.11 NEWS DESK : ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಗೌಡಳ್ಳಿ ಶ್ರೀ ಸವದುರ್ಗಾ ಪರಮೇಶ್ವರಿ ಕೃಪ ಪೋಷಿತ ಯಕ್ಷಗಾನ ಸಮಿತಿ ವತಿಯಿಂದ ವೀರಗಾಸೆ ಮತ್ತು ದಶ್ರೀರಾಮಚರಿತ್ರೆ ಕಥಾ ಭಾಗದ ಬಯಲಾಟ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ವಹಿಸಿ ಮಾತನಾಡಿ, ಸ್ಥಾಪಕ ಪ್ರಧಾನ ಅರ್ಚಕರಾದ ದಿ.ಎ.ಟಿ.ವೆಂಕಟರಮಣಚಾರ್ಯ ಅವರು ಶ್ರೀನವದುರ್ಗಾ ಪರಮೇಶ್ವರಿ ದೇವಾಲಯವನ್ನು ಸರ್ವಧರ್ಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದೆ. ವಾರ್ಷಿಕ ಜಾತ್ರೋತ್ಸವ, ಕ್ರೀಡಾಕೂಟ, ಅನ್ನದಾನ ನಡೆಯುತ್ತಿದೆ. ಪವಿತ್ರ ಕ್ಷೇತ್ರದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಯಕ್ಷಗಾನ ಕಲೆಯನ್ನು ಕೊಡಗಿನಲ್ಲೂ ಪಸರಿಸುವ ಪ್ರಯತ್ನ ಮುಂದುವರಿದಿದೆ ಎಂದರು.
ಗ್ರಾಮೀಣ ಭಾಗದಿಂದ ಒಂದೂವರೆ ಸಾವಿರದಷ್ಟು ಜನರು ಯಕ್ಷಗಾನ ನೋಡಲು ಬಂದಿದ್ದಾರೆ. ಜನರಿಗಿರುವ ಕಲೆಯ ಮೇಲಿನ ಗೌರವವನ್ನು ಇದು ಸೂಚಿಸುತ್ತದೆ ಎಂದು ಹೇಳಿದರು.
ಭಾಗವತರಾದ ಎ.ಟಿ.ವೆಂಕರಮಣಾಚಾರ್ಯ ಅವರ ಸ್ಮರಣಾರ್ಥ ಆರೋಗ್ಯ ಸುರಕ್ಷಾ ಅಧಿಕಾರಿ ಕೆ.ಪಿ.ಪಾರ್ವತಿ, ದಾನಿಗಳಾದ ಚನ್ನಾಪುರ ಪ್ರೇಮ ಅವರುಗಳನ್ನು ಸನ್ಮಾನಿಸಲಾಯಿತು.
ದಾನಿಗಳನ್ನು ಇದೇ ಸಂದರ್ಭ ವೇದಿಕೆಯಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಯಕ್ಷಗಾನ ಸಮಿತಿ ಅಧ್ಯಕ್ಷ ಬಿ.ಎಲ್.ಚಂದ್ರಶೇಖರ್, ಗೌರವಾಧ್ಯಕ್ಷ ಜಿ.ಎನ್.ವೀರಭದ್ರಪ್ಪ, ದೇವಾಲಯ ಸಮಿತಿ ಗೌರವಾಧ್ಯಕ್ಷ ಹೆಚ್.ಆರ್.ಮುತ್ತಣ್ಣ, ಸಮುದಾಯ ಸಮಿತಿ ಅಧ್ಯಕ್ಷ ಜಿ.ಎ.ಮಹೇಶ್, ಕ್ರೀಡಾಸಮಿತಿ ಅಧ್ಯಕ್ಷ ಎಸ್.ಬಿ.ಗುರುಪ್ರಸಾದ್, ವೀರಗಾಸೆ ಕುಣಿತದ ದಾನಿಗಳಾದ ಹೆಚ್.ಡಿ.ಸುಬ್ರಮಣಿ, ಜಿ.ಎಂ.ಜಯಪ್ಪ, ಅರ್ಚಕ ಎ.ವಿ.ವಿಶ್ವರೂಪಚಾರ್ಯ ಇದ್ದರು.










