ಮಡಿಕೇರಿ ಮಾ.16 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಅವರು AC ROOM ನಿಂದ ಬೀದಿ ಬದಿಯ ಎಳನೀರು ವರೆಗೆ ಬಂದಾಗಿದೆ. ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿತು ಎಂದು ಬೇಸರಗೊಂಡಿದ್ದ ಕಾರ್ಯಕರ್ತರು ಕೂಡ ಯದುವೀರ್ ಅವರ ಚುನಾವಣಾ ಉತ್ಸಾಹ ಕಂಡು ಬೆರಗಾಗಿದ್ದಾರೆ. ಕೊಡಗು ಮತ್ತು ಮೈಸೂರು ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿರುವ ಯದುವೀರ್ ಅವರು ಮತದಾರರ ಹೃದಯ ತಟ್ಟುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.












