ಮಡಿಕೇರಿ ಮಾ.18 NEWS DESK : ಸೋಮವಾರಪೇಟೆ ತಾಲೂಕಿನ ವಾಲ್ನೂರು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ರಾಮ ದೇವರ ವಾರ್ಷಿಕ ಉತ್ಸವವು ಮಾ.24 ರಿಂದ ಮಾ.26ರ ವರೆಗೆ ನಡೆಯಲಿದೆ.
ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ.
ಮಾ.24 ರಂದು ರಾತ್ರಿ 8 ಗಂಟೆಗೆ ಕದಳಿ ಕಟ್ಟುವುದು, ಮಾ.25 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಮಾದೇಶ್ವರ ಸ್ವಾಮಿ ಪರ್ವ, ಮಧ್ಯಾಹ್ನ 3 ಗಂಟೆಗೆ ತೆಂಗಿನ ಕಾಯಿಗೆ ಗುಂಡು ಹಾರಿಸುವುದು, ಸಂಜೆ 5 ಗಂಟೆಗೆ ಮಹಾಪೂಜೆ, ಮಂಗಳಾರತಿ, ಸಂಜೆ 6 ಗಂಟೆಗೆ ಉತ್ಸವಮೂರ್ತಿ ಬಸವಣ್ಣ ದೇವರ ಮೆರವಣಿಗೆ ನಡೆಯಲಿದೆ.
ಮಾ.26 ರಂದು ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ಭೋಜನದ ಪ್ರಸಾದ, ಸಂಜೆ 4.30 ಗಂಟೆಗೆ ಕೊಂಡ ಹಾಯುವುದು, ಸಂಜೆ 5 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ತಕ್ಕರು, ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.







