ವಿರಾಜಪೇಟೆ ಮಾ.18 NEWS DESK : ಬೆಂಗಳೂರಿನ ಮತ್ತಿಕೆರೆಯ ಲಲಿತ ಆಡಿಟೋರಿಯಂನಲ್ಲಿ ನಡೆದ ಕರುನಾಡ ನಿಧಿ ಪತ್ರಿಕೆ ಉದ್ಘಾಟನಾ ಸಮಾರಂಭದಲ್ಲಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ಲಾವಣ್ಯ ಮತ್ತು ಶ್ರೇಯಾಸೋಮಣ್ಣ ಭಾಗವಹಿಸಿ ನೃತ್ಯ ಪ್ರದರ್ಶನ ನೀಡಿದ್ದರು. ಇದೇ ಸಂದರ್ಭ ಇಬ್ಬರು ನೃತ್ಯಪಟುಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭಕಾರ್ಯಕ್ರಮದಲ್ಲಿ ಡಾ.ಕೆಂಚನೂರು ಶಂಕರ್, ಕಂಠೀರವ ಸ್ಟುಡಿಯೋದ ಅಧ್ಯಕ್ಷರಾದ ಮಹಬೂ ಪಾಷ, ಶಣ್ಮುಗಂ, ಆಯೋಜಕರಾದ ಸಲ್ಮಾನ್ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.









