ಮಡಿಕೇರಿ ಮಾ.20 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ದ್ವಿತೀಯ ವರ್ಷದ ಸಮಾಜ ಕಾರ್ಯ ವಿದ್ಯಾರ್ಥಿಗಳಿಂದ ವಿಶ್ವ ಸಮಾಜ ಕಾರ್ಯ ದಿನಾಚಣೆಯನ್ನು ಸ್ತ್ರೀ ಶಕ್ತಿ ಧಾಮ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.
ಹಿರಿಯರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಅವರೊಡನೆ ಸಮಯ ಕಳೆಯುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದರು. ಹಿರಿಯರ ಮನಸ್ಸುಗಳಿಗೆ ಸಂತೋಷವನ್ನು ತುಂಬಿ ಉಲ್ಲಾಸಿತರಾಗಿಸಿದರು ಹಾಗೂ ಕೇಕ್ ಕತ್ತರಿಸುವ ಕೇಕ್ ಕತ್ತರಿಸುವ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಯೋಗ ಶಿಕ್ಷಕರಾದ ರೀನಾ ಹಾಗೂ ವಿದ್ಯಾರ್ಥಿಗಳಾದ ರುನೈಝ್, ಪ್ರಜೀತ್, ಶರತ್, ರವಿ, ತರುಣ್, ತುಳಸಿ, ದಿಕ್ಷೀತ್ ಹಾಜರಿದ್ದರು.









