ಮಡಿಕೇರಿ ಮಾ.23 : ಶೋಭಕೃತ್ ಸಂವತ್ಸರದ ಕೊನೆಯ ಗ್ರಹಣ ಮಾ.25 ರಂದು ಚಂದ್ರ ಗ್ರಹಣವಾಗಿರುತ್ತದೆ. ಈ ಗ್ರಹಣವು ಮಾರ್ಚ್ 25 ಸೋಮವಾರ ಹುಣ್ಣಿಮೆಯಂದು ಭಾರತದ ಸಮಯ ಬೆಳಿಗ್ಗೆ 10.21 ರಿಂದ ಮಧ್ಯಾಹ್ನ 3.5ರ ವರೆಗೆ ಘಟಿಸಲಿದ್ದು, ಹಗಲು ಆಗಿರುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ.
ಏಷ್ಯ ಖಂಡದ ಉತ್ತರ ಮತ್ತು ಪೂರ್ವ ಯುರೋಫ್, ಆಸ್ಟ್ರೇಲಿಯ, ಆಫ್ರಿಕ, ಅಮೇರಿಕ ಖಂಡದ ಉತ್ತರ ಮತ್ತು ಪೂರ್ವದಲ್ಲಿ ಗ್ರಹಣ ಗೋಚರಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ತಜ್ಞರು ವೈಜ್ಞಾನಿಕ ಮನೋಭಾವನೆಗೆ ತಕ್ಕಂತೆ ನಮ್ಮಲ್ಲಿ ಗೋಚರಿಸದೆ ಇರುವುದರಿಂದ ಗ್ರಹಣ ಆಚರಣೆಯು ಅಗತ್ಯವಿಲ್ಲ ಹಾಗೂ ದೋಷವು ಇಲ್ಲವೆಂದು ಸಮಜಾಯಿಷಿಕೆ ಕೊಡುತ್ತಾರೆ.
ಆದರೆ ಜಗತ್ತಿಗೆ ಒಂದೇ ಭೂಮಿ, ಒಂದೇ ಚಂದ್ರ, ಒಂದೇ ಸೂರ್ಯ. ಆದ್ದರಿಂದ ಧರ್ಮ ಗ್ರಂಥದ ಪ್ರಕಾರ ಚಂದ್ರನಿಗೆ ರಾಹು ಗ್ರಹಸ್ತಗ್ರಹಣವೆಂದು ಹೇಳಲ್ಪಡುತ್ತದೆ. ಆದ್ದರಿಂದ ಈ ಗ್ರಹಣ ದೋಷಗಳು ಇಡೀ ಭೂ-ಮಂಡಲಕ್ಕೆ ವ್ಯಾಪಿಸಿರುತ್ತದೆ ಎನ್ನುವುದು ನನ್ನ ತಾರ್ಕಿಕ ಸ್ಪಷ್ಟನೆ.
ಗ್ರಹಣವು ಉತ್ತರ ನಕ್ಷತ್ರದ ನಾಲ್ಕನೆಯ ಪಾದದಲ್ಲಿ ಘಟಿಸುವುದರಿಂದ ಉತ್ತರ ನಕ್ಷತ್ರದ ಕನ್ಯಾ ರಾಶಿಯವರಿಗೆ ಕಂಟಕ ದೋಷಗಳು ಹೆಚ್ಚು ಬಾಧಿಸಲಿದೆ. ಹಾಗೂ ವೃಷಭ ಲಗ್ನದಲ್ಲಿ ಘಟಿಸುವುದರಿಂದ ವೃಷಭ ರಾಶಿಯವರಿಗೆ ಬಾಧಕವು ಬರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ.
ಅಂದರೆ ಕನ್ಯರಾಶಿಯಲ್ಲಿ ಜನಿಸಿದವರು, ವೃಷಭರಾಶಿಯಲ್ಲಿ ಜನನವಾದವರು ಗ್ರಹಣಾಚರಣೆಯನ್ನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರು ಆಚರಿಸಿದರೆ ಪ್ರಾಯಶ್ಚಿತವನ್ನು ಮಾಡಿಕೊಂಡರೆ ಉತ್ತಮ. ಕರ್ಕಾಟಕ ಲಗ್ನದಲ್ಲಿ ಗ್ರಹಣ ಮೋಕ್ಷ ಕಾಲವಾದುದ್ದರಿಂದ ಕರ್ಕಾಟಕ ರಾಶಿಯಲ್ಲಿ ಜನನವಾದವರಿಗೆ ಈ ಗ್ರಹಣದಿಂದ ಉತ್ತಮ ಫಲ ದೊರಕಲಿದೆ. ಆದರೆ ಉದ್ಯೋಗದ ಮುಂಬಡ್ತಿ ಅನೇಕ ಕಾರಣದಿಂದ ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆ ಆಗಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಗ್ರಹಣದೋಷ ಪರಿಹಾರ ಉತ್ತರ ನಕ್ಷತ್ರ ಕನ್ಯಾರಾಶಿಯಲ್ಲಿ ಜನಿಸಿದವರು ಹಾಗೂ ವೃಷಭರಾಶಿಯಲ್ಲಿ ಜನಿಸಿದವರು ಗ್ರಹಣ ಕಾಲದಲ್ಲಿ ಅಂದರೆ ಗ್ರಹಣ ಹಿಡಿಯುವ ಸಮಯದಲ್ಲಿ ತಲೆಯಿಂದ ಸ್ನಾನವನ್ನು ಮಾಡಿ ತುಪ್ಪದ ದೀಪವನ್ನ ಹಚ್ಚಿ, ಒಂದು ಕೆ.ಜಿ ಅಕ್ಕಿ, ಕಾಲು ಕೆ.ಜಿ ಉದ್ದು, ಎಲೆ-ಅಡಿಕೆ, ಬಾಳೆಹಣ್ಣು, ಒಂದು ತೆಂಗಿನಕಾಯಿ, ಯಥಾ ಶಕ್ತಿ ದಕ್ಷಿಣೆ ಮನೆಯಲ್ಲೇ ತೆಗೆದಿಗಡಬೇಕು.
ಗ್ರಹಣ ಸ್ಪರ್ಶಕಾಲದಿಂದ ಮೋಕ್ಷ ಕಾಲದವರೆಗೆ ಭೋಜನ ಹಾಗೂ ನಿದ್ರೆ ಮಾಡಕೂಡದು. ಗ್ರಹಣ ಮೋಕ್ಷದ ನಂತರ ತಲೆಯಿಂದ ಪುನಃ ಸ್ನಾನ ಮಾಡಿ ತೆಗೆದಿಟ್ಟ ದಾನದ ವಸ್ತುಗಳನ್ನು ದೇವಾಲಯಕ್ಕೆ ನೀಡಿ, ಕಪ್ಪುಹಸುವಿಗೆ ಬೆಲ್ಲ, ಉದ್ದು ಹಾಗೂ ಅಕ್ಕಿ ಮಿಶ್ರಿತವನ್ನು ತಿನ್ನಲಿಕೆ ನೀಡಬೇಕು. ಇದರಿಂದ ಗ್ರಹಣ ದೋಷಗಳು ಪರಿಹಾರವಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ.
ಡಾ.ಮಹಾಬಲೇಶ್ವರ ಭಟ್, ಮೂರ್ನಾಡು.
81056 34429








