
ಮಡಿಕೇರಿ NEWS DESK ಜು.7 : ಕೊಡಗು ಜಿಲ್ಲೆಯ ದಶಕಗಳ ಜ್ವಲಂತ ಸಮಸ್ಯೆಯಾದ ‘ಸಿ ಮತ್ತು ಡಿ’ ವರ್ಗದ ಜಮೀನುಗಳು, ಸಿಸಿ ಪೈಸಾರಿ, ಜಮ್ಮಾ ಭೂಮಿಗಳ ಹಕ್ಕು ಹಸ್ತಾಂತರ ಹಾಗೂ ಸಕ್ರಮ ಪ್ರಕ್ರಿಯೆ ಕುರಿತು ರಾಜ್ಯ ಸರಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೊಡಗು- ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಒತ್ತಾಯಿಸಿದ್ದಾರೆ. ಈ ವಿಚಾರ ಪ್ರಸ್ತುತ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿದ್ದು, ಸರಕಾರ ದಿಟ್ಟ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಸಂಸದರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಕೇಂದ್ರ ಸರಕಾರದ ಯಾವುದೇ ರೀತಿಯ ಸಹಕಾರ, ಅರಣ್ಯ ಕಾಯ್ದೆಗಳ ತಿದ್ದುಪಡಿ ಅಥವಾ ವಿಶೇಷ ಅನುಮೋದನೆಗಳ ಅಗತ್ಯವಿದ್ದಲ್ಲಿ, ತಾವು ವೈಯಕ್ತಿಕವಾಗಿ ಮುತುವರ್ಜಿ ವಹಿಸಿ ಕೇಂದ್ರದಿAದ ಸಂಪೂರ್ಣ ಸಹಕಾರ ಕೊಡಿಸಲು ಸಿದ್ಧವಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.








