ಮಡಿಕೇರಿ ಮಾ.24 NEWS DESK : ಎರಡು ಹುಲಿಗಳ ನಡುವಿನ ಕಾದಾಟದಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಿರುವ ಘಟನೆ ಹುಣುಸೂರು ನಾಗರಹೊಳೆಯ ಹುಲಿ ಸಂರಕ್ಷಿತ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ವಲಯದಲ್ಲಿ ನಡೆದಿದೆ.
ಆನೆಚೌಕೂರು ವನ್ಯಜೀವಿ ವಲಯದ ಗಣಗೂರು ತಾವರೆಕೆರೆ ಅರಣ್ಯ ಪ್ರದೇಶದಲ್ಲಿ ಹುಲಿಯ ಕಳೇಬರ ಸಿಕ್ಕಿದೆ. ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸಿದ ಕುರುಹು ಇಲ್ಲಿ ಪತ್ತೆಯಾಗಿದೆ. ನಾಗರಹೊಳೆ ಉದ್ಯಾನವನದ ಮುಖ್ಯ ಪಶುವೈದ್ಯಾಕಾರಿ ರಮೇಶ್ ಹಾಗೂ ಬಾಳೆಲೆಯ ಪಶುವೈದ್ಯಾಧಿಕಾರಿ ಭವಿಷ್ಯ ಕುಮಾರ್ ಅವರು ಹುಲಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು. ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.










