ಮಡಿಕೇರಿ ಮಾ.24 NEWS DESK : ದುಷ್ಕರ್ಮಿಗಳ ಗುಂಡೇಟಿಗೆ 11 ವರ್ಷದ ಕಾಡುಕೋಣವೊಂದು ಬಲಿಯಾದ ಘಟನೆ ಪಿರಿಯಾಪಟ್ಟಣ ಮುಖ್ಯರಸ್ತೆಯಿಂದ ಪಾರದಕಟ್ಟೆ ಕಳ್ಳಬೇಟೆ ತಡೆ ಶಿಬಿರಕ್ಕೆ ಹೋಗುವ ರಸ್ತೆಯ ಮೈಸೂರು-ಕೊಡಗು ಚೈನ್‌ಗೇಟ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಇದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಇಂದು ಬೆಳಗ್ಗೆ ಕಾಡುಕೋಣಕ್ಕೆ ಗುಂಡು ಹೊಡೆದ ಶಬ್ಧ ಕೇಳಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರುವ ಸಂದರ್ಭ ವನ್ಯಜೀವಿ ಬೇಟೆಗಾರರು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಅರಣ್ಯ ಇಲಾಖೆ ವಿಶೇಷ ತಂಡ ರಚಿಸಿದೆ.










