ವಿರಾಜಪೇಟೆ ಮಾ.27 NEWS DESK : ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಉತ್ಸವದ ಅಂಗವಾಗಿ ಕಳಶ ಪೂಜೆ, ಪಟ್ಟಣಿ ಹಬ್ಬ ಜರುಗಿ ಮಧ್ಯಾಹ್ನ ದೇವರ ಪ್ರದರ್ಶನ ಬಲಿ, ವಿಶೇಷ ಮಹಾಪೂಜೆ ನಡೆಯಿತು.
ನಂತರ ನೆರೆದಿದ್ದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನದಾನ ನೆರವೇರಿತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಉತ್ಸವದ ಪೂಜಾ ವಿಧಿ ವಿಧಾನವನ್ನು ಮುಖ್ಯ ಅರ್ಚಕ ರಾಧಕೃಷ್ಣ ಮತ್ತು ಬಳಗ ನೆರವೇರಿಸಿ ಕೊಟ್ಟರು.

