ವಿರಾಜಪೇಟೆ ಮಾ.28 NEWS DESK : ಇತಿಹಾಸ ಪ್ರಸಿದ್ಧ ಬಾಳೂಗೋಡು ಶ್ರೀ ತ್ರಿಮೂರ್ತಿ ದೇವರ ವಾರ್ಷಿಕ ತೆರೆ ಮಹೋತ್ಸವವು ಮಾ.30 ರಿಂದ ಏ.1 ರ ವರೆಗೆ ನಡೆಯಲಿದೆ.
ವಾರ್ಷಿಕ ತೆರೆ ಮಹೋತ್ಸವ ದ ಅಂಗವಾಗಿ ಮೂರು ದಿನಗಳು ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಮಾ.31 ರಂದು ತ್ರಿಮೂರ್ತಿ ದೇವರ ವಾರ್ಷಿಕ ತೆರೆ ಮಹೋತ್ಸವ ನಡೆಯಲಿದೆ. ವಾರ್ಷಿಕ ತೆರೆ ಮಹೋತ್ಸವದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ತಕ್ಕ ಮುಖ್ಯಸ್ಥ ರು, ಆಡಳಿತ ಮಂಡಳಿ ಯ ಸದಸ್ಯರು ಮನವಿ ಮಾಡಿದ್ದಾರೆ.

