ಮಡಿಕೇರಿ ಮಾ.28 NEWS DESK : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನ 2024ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧ್ಯಕ್ಷರಾಗಿ ಜಾನ್ಸನ್ ಪಿಂಟೋ ಆಯ್ಕೆಯಾಗಿದ್ದಾರೆ.
ಗೌರವಧ್ಯಕ್ಷರಾಗಿ ಜೋಕಿಂ ವಾಸ್, ಕಾರ್ಯಾಧ್ಯಕ್ಷರಾಗಿ ವಿ.ಎ.ಲಾರೆನ್ಸ್, ಉಪಾಧ್ಯಕ್ಷರುಗಳಾಗಿ ವಿನ್ಸಿ ಡಿಸೋಜ, ಎ.ಜೆ.ಯೇಸುದಾಸ್, ಮೈಕಲ್, ಜೋಕಿಂ ರಾಡ್ರಿಗಸ್ ನೇಮಕಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಬೆನ್ನಿ ಅಗಸ್ಟಿನ್, ಮಹಿಳಾ ಉಪಾಧ್ಯಕ್ಷರಾಗಿ
ಫಿಲೋಮಿನಾ, ಖಜಾಂಚಿಯಾಗಿ ಜೇಮ್ಸ್ ಕೆದಕಲ್, ಸಂಘಟನಾ ಕಾರ್ಯದರ್ಶಿಯಾಗಿ ಜೂಡಿವಾಸ್, ಸಹ ಕಾರ್ಯದರ್ಶಿಗಳಾಗಿ ಪ್ರವೀಣ್ ಡಿಸೋಜ, ವಿನ್ಸಿ ಪಿಂಟೊ, ರಾಬಿನ್ ಪೌಲ್, ಮ್ಯಾಥ್ಯು ಆನ್ಸಿ ನೇಮಕಗೊಂಡಿದ್ದಾರೆ.
ಜಿಲ್ಲಾ ಸಂಚಾಲಕರುಗಳಾಗಿ ಜಾನ್ಸ್‍ನ್, ಅಂತೋಣಿ ಡಿಸೋಜ, ರೊಸ್ ಮೇರಿ ರಾಡ್ರಿಗಸ್, ಕ್ರೀಡಾ ಕಾರ್ಯದರ್ಶಿಯಾಗಿ ಅಂತೋಣಿ ಪ್ರಭುರಾಜ್,
ಗೌರವ ಸಲಹೆಗಾರರಾಗಿ ಎಸ್.ಎಂ ಡಿಸಿಲ್ವಾ, ಜೋಸೆಫ್ ಸ್ಯಾಂ, ಅಗಸ್ಟಿನ್ ಜಯರಾಜ್, ಸಾರ್ವಜನಿಕ ಸಂಪರ್ಕಧಿಕಾರಿಯಾಗಿ ಮಾರ್ವಿನ್‍ಲೋಬೊ, ಮಾಧ್ಯಮಾ ಎಂ.ಬಿ.ವಿನ್ಸಂಟ್ ವಿನೋದ್, ಯೂತ್ ವಿಂಗ್ ಅಧ್ಯಕ್ಷರಾಗಿ ಪ್ರಶಾಂತ್ ಲೋಬೊ, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಸಾರ್ಜೆಂಟ್ ಆಯ್ಕೆಯಾಗಿದ್ದಾರೆ.
ಸುಂಟಿಕೊಪ್ಪದ ಸಂತ ಅಂತೋಣಿ ಚರ್ಚ್‍ನಲ್ಲಿ ಸಮುದಾಯದ ಮುಖಂಡರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಏ.14 ರಂದು ಮಡಿಕೇರಿಯ ಸಂತಮೈಕಲರ ಚರ್ಚ್‍ನಲ್ಲಿ ಸಂಜೆ 4.30 ಗಂಟೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.
ಕೊಡಗಿನ 24 ಧರ್ಮಕೇಂದ್ರಗಳನ್ನು ಒಳಗೊಂಡಂತೆ ಸಂಘವು ಕಾರ್ಯಾಚರಿಸಲಿದ್ದು, ಜಿಲ್ಲೆಯಲ್ಲಿ ಸುಮಾರು 18 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಎಂದು ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ತಿಳಿಸಿದ್ದಾರೆ.