
ಸುಂಟಿಕೊಪ್ಪ ಮಾ.18 NEWS DESK : ಹಬ್ಬದ ದಿನದಂದು ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಕುಶಾಲನಗರ ವೃತ್ತ ನಿರೀಕ್ಷಕರಾದ ದಿನೇಶ್‍ಕುಮಾರ್ ಕರೆ ನೀಡಿದರು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ರಂಜಾನ್, ರಾಮನವಮಿ, ಯುಗಾದಿ ಪ್ರಯುಕ್ತ ಆಯೋಜಿಸಲಾಗಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸುಂಟಿಕೊಪ್ಪ ಪಟ್ಟಣವು ಶಾಂತಿ ಸೌಹರ್ಧತೆಯನ್ನು ಹಿಂದಿನಿಂದಿಲ್ಲೂ ಕಾಯ್ದುಕೊಂಡು ಬಂದಿದೆ. ಈ ಸೌಹಾರ್ದತೆ ತೆಯನ್ನು ಮುಂದೆಯೂ ಗಟ್ಟಿಯಾಗಿ ನೆಲೆಯೂರಬೇಕಾದರೆ ವಿವಿಧ ಧರ್ಮಗಳ ಮುಖಂಡರು ಮುಂದಾಳತ್ವ ತೆಗದುಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆಯು ಮಾರ್ಗದರ್ಶನ ನೀಡಬೇಕೆಂದು ಅವರು ಕಿವಿಮಾತು ಹೇಳಿದರು. ಹಬ್ಬಗಳನ್ನು ಆಚರಿಸುವ ಸಂದರ್ಭ ಇತರರಿಗೆ ಭಾವನೆಗಳನ್ನು ಗೌರವಿಸುವಂತಿರಬೇಕು. ಅವರ ಭಾವನೆಗಳಿಗೆ ಘಾಸಿ ಉಂಟಾಗದಂತೆ ಆಚರಿಸಬೇಕು ಆಗಿದ್ದಾಗ ಮಾತ್ರ ನಮ್ಮ ಹಬ್ಬ ಆಚರಣೆ ಸಂಸ್ಕøತಿಗೆ ಮಹತ್ವತೆ ಕೂಡಿ ಬರಲಿದೆ. ಅನ್ಯನೋತೆಯು ಹೆಚ್ಚಾಗಲಿದೆ ಶಾಂತಿ ಸೌಹರ್ಧತೆಯು ಕಂಡುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‍ರಾಜ್, ಅಪರಾಧ ವಿಭಾಗ ಠಾಣಾಧಿಕಾರಿ ಗೋಪಾಲ್ ಶಾಂತಿ ಸೌಹಾರ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ವಿವಿಧ ಧಾರ್ಮಿಕ ಕೇಂದ್ರದ ಮುಖಂಡರುಗಳಾದ, ಕೆ.ಇ.ಕರೀಂ, ಕೆ.ಹೆಚ್.ಶರೀಫ್, ಶ್ರೀ. ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಖಜಾಂಚಿ ರಮೇಶ್ ಪಿಳ್ಳೆ, ಗೌರಿ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ವಿಘ್ನೇಶ್, ಹರದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮನಾಭ, ರವಿ, ಅಬ್ದುಲ್ ಸಲಾಂ, ಸೂಫಿ, ಗದ್ದೆಹಳ್ಳ ಜಮಾಯಿತಿನ ಇಬ್ರಾಹಿಂ ಸೇರಿದಂತೆ ಕೊಡಗರಹಳ್ಳಿ, 7ನೇ ಹೊಸಕೋಟೆ, ಕಂಬಿಬಾಣೆ ಗ್ರಾಮದ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.









