ಮಡಿಕೇರಿ ಮಾ.28 NEWS DESK : ಇತಿಹಾಸ ಪ್ರಸಿದ್ಧ ಕಲ್ಲುಗುಂಡಿಯ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಆರಂಭಗೊಂಡಿದೆ. ಮಾ.28 ರಿಂದ 30 ರವರೆಗೆ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಮತ್ತು ಪಂಜುರ್ಲಿ, ಕಲ್ಲುರ್ಟಿ, ಗುಳಿಗ ಹಾಗೂ ರಕ್ತೇಶ್ವರಿ ದೈವಗಳ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಮಾ.28 ರಂದು ರಾತ್ರಿ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಟಿತು. 9 ಗಂಟೆಗೆ ಮೇಲೇರಿಗೆ ಅಗ್ನಿ ಸ್ಪರ್ಷವಾಯಿತು. ಕುಲ್ಚಾಟ ಹೊರಡುವ ಧಾರ್ಮಿಕ ವಿಧಾನವೂ ನಡೆಯಿತು. ಮಾ.29 ರಂದು ಬೆಳಿಗ್ಗೆ 6 ಗಂಟೆಗೆ ಅಗ್ನಿ ಪ್ರವೇಶ, 7 ಗಂಟೆಗೆ ಪ್ರಸಾದ ವಿತರಣೆ, 8 ಗಂಟೆಗೆ ಮಾರಿಕಳ ಪ್ರವೇಶ ಹಾಗೂ ಮಾರಿಕಳದಿಂದ ಬಂದ ನಂತರ ಹರಕೆಯ ಸುರಿಗೆಗಳನ್ನು ಒಪ್ಪಿಸುವುದು. ನಂತರ ಪ್ರಸಾದ ವಿತರಣೆ ಮುಂದುವರೆಯಲಿದೆ.
ಮಾ.30 ರಂದು ಮಧ್ಯಾಹ್ನ 1 ಗಂಟೆಗೆ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ಹಾಗೂ ರಕ್ತೇಶ್ವರಿ ದೈವಗಳ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಮಾ.28 ರಂದು ರಾತ್ರಿ 9.30 ಗಂಟೆಗೆ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಶ್ರೇಷ್ಠ ಕಲಾವಿದರಿಂದ ವಿಶೇಷ ಕಾರ್ಯಕ್ರಮ “ಕಲ್ಲುಗುಂಡಿಯ ಕಲರವ” ನಡೆಯುತ್ತಿದೆ. ಸೇವೆಯನ್ನು ಮಾಡಿಸುವ ಭಕ್ತರು ಕೆ.ಆರ್.ಜಗದೀಶ್ ರೈ (ಅಧ್ಯಕ್ಷರು) 9448501647, ಕೆ.ವಿ.ಮಂಜುನಾಥ್ (ಕಾರ್ಯದರ್ಶಿ) 9448548604, ಬಿ.ಆರ್.ಪದ್ಮಯ್ಯ (ಕೋಶಾಧಿಕಾರಿ) 9448976414 ಹಾಗೂ ಬಿ.ಶಿವರಾಮ (ಕಚೇರಿ ನಿರ್ವಾಹಕ) 9008637924 ನ್ನು ಸಂಪರ್ಕಿಸಬಹುದಾಗಿದೆ.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*