ಮಡಿಕೇರಿ ಏ.5 NEWS DESK : ಕುಶಾಲನಗರದ ಸಾಹಿತಿ ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ ಅವರಿಗೆ ಸಾಹಿತ್ಯ ಮತ್ತು ಪಾಕಕಲಾ ರಂಗದ ಸಾಧನೆಗಾಗಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಯನ್ನು ಇಂಡೋನೇಶ್ಯ ದೇಶದ ಬಾಲಿ ದ್ವೀಪದಲ್ಲಿ ಪ್ರದಾನ ಮಾಡಲಾಯಿತು.
ವಿಶ್ವವಾಣಿ ಪತ್ರಿಕೆ ವತಿಯಿಂದ ನೀಡಲಾಗುವ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪೈಕಿ ಸಾಹಿತ್ಯ ಮತ್ತು ಪಾಕಕಲೆ ಕ್ಷೇತ್ರದಿಂದ ಈ ವಷ೯ದ ಗ್ಲೋಬಲ್ ಅಚೀವಸ್೯ ಪ್ರಶಸ್ತಿಗೆ ಕೊಡಗಿನ ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ ಆಯ್ಕೆಯಾಗಿದ್ದರು. ಇವರಿಗೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಖ್ಯಾತ ಕಲಾವಿದೆ ಡಾ. ಜಯಮಾಲ, ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀವಚನಾನಂದಸ್ವಾಮೀಜಿ, ಬಾಲಿಯ ವೈಸ್ ಕೌನ್ಸುಲ್ ಲವಲೇಶ್ ಕುಮಾರ್, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ ಬಾಲಿ – ಇಂಡೋನೇಷ್ಯಾ ದೇಶದ ವಿವಿಧ ಗಣ್ಯರು ಪ್ರಶಸ್ತಿ ಪ್ರದಾನ ಕಾಯ೯ಕ್ರಮದಲ್ಲಿ ಹಾಜರಿದ್ದರು.
ಬಾಲಿ ದ್ವೀಪದ ಸುಂದರ ಅರಮನೆ ಸುಕಾನೋ೯ಗೆ ಭೇಟಿ ನೀಡಿದ ಸಂದಭ೯ ಪ್ರಶಸ್ತಿ ಪಡೆದ ಸಾಧಕರನ್ನು ರಾಜಮನೆತನದ ಪ್ರಮುಖ, ಬಾಲಿಯ ಸೆನೆಟರ್ ಡಾ.ಗುಸ್ತಿ ನುರಾಯು ಆಯ೯ ವೇದಕಣ೯ ಸನ್ಮಾನಿಸಿ ಗೌರವಿಸಿದರು.
ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ ಅವರ ಕೊಡವ ಸಾಂಪ್ರದಾಯಿಕ ಸೀರೆಯ ಮಹತ್ವದ ಬಗ್ಗೆ ಮಾಹಿತಿ ಪಡೆದುಕೊಂಡ ಗುಸ್ತಿ ನುರಾಯು, ಕೊಡವರು ಮತ್ತು ಕೊಡಗಿನ ಬಗ್ಗೆಯೂ ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡದ್ದು ಗಮನಾಹ೯ವಾಗಿತ್ತು. ಅರಮನೆಗೆ ಭೇಟಿ ನೀಡಿದ ಹಂಚೆಟ್ಟೀರ ಫ್ಯಾನ್ಸಿ ಮತ್ತು ಮುತ್ತಣ್ಣ ಸೇರಿದಂತೆ ಸಾಧಕರಿಗೆ ಲಕ್ಷ್ಮಿಯ ಚಿತ್ರ ಹೊಂದಿರುವ ಚಿನ್ನದ ನಾಣ್ಯವನ್ನು ಕೊಡುಗೆಯಾಗಿ ನೀಡಲಾಯಿತಲ್ಲದೇ ಸಾಧಕರು ಮತ್ತು ಕುಟುಂಬಸ್ಥರಿಗೆ ಬಾಲಿಯ ರಾಜಾತಿಥ್ಯ ನೀಡಿದ್ದು ವಿಶೇಷವಾಗಿತ್ತು.