ನಾಪೋಕ್ಲು ಏ.6 NEWS DESK : ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಉತ್ಸವದ ಅಂಗವಾಗಿ ಗಣಪತಿ ಹೋಮ ಹಾಗೂ ಶುದ್ಧ ಕಳಸ ನಡೆಯಿತು.
ಕೇರಳದ ನೀಲೇಶ್ವರದ ಮುರಳಿ ಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಿತು. ಸಂಜೆ ಮುತ್ತಪ್ಪ ದೇವರ ಕಳಸ ಜರುಗಿತು.
ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳದ ಚಂಡೆಯೊಂದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ ನೆರವೇರಿತು. ಮೆರವಣಿಗೆಯಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಕೇರಳದ ಚಂಡೆ ಹಾಗೂ ನೃತ್ಯ ಜನಮನ ಸೆಳೆಯಿತು.
ಆಕರ್ಷಕ ಬಿರುಸು ಬಾಣದ ಪ್ರದರ್ಶನವು ನಡೆಯಿತು.
ಬಳಿಕ ಮುತ್ತಪ್ಪ ದೇವರ ವೆಳ್ಳಾಟಂ, ಕುಟ್ಟಿಚ್ಚಾತ ದೇವರ ಹಾಗೂ ಗುಳಿಗ ದೇವರ ವೆಳ್ಳಾಟಂ ನಡೆಯಿತು.
ತಿರುವಪ್ಪ ಮತ್ತು ಮುತ್ತಪ್ಪ ಕೊಲಗಳು ಜನರನ್ನು ಆಕರ್ಷಿಸಿದವು. ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಭಕ್ತಾರಿಗೆ ಅನ್ನದಾನ ನಡೆಯಿತು.
ವಿವಿಧೆಡೆಯಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಅಧ್ಯಕ್ಷ ಎ.ಕೆ.ಚಂದ್ರನ್, ಉಪಾಧ್ಯಕ್ಷ ಸುಕುಮಾರ, ಕಾರ್ಯದರ್ಶಿ ರಾಜೀವನ್, ಉಪ ಕಾರ್ಯದರ್ಶಿ ಎಂ.ಕೆ.ತುಂಗಾ, ಖಜಾಂಚಿ ವಿನಿಲ್ ಪಪ್ಪು ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ನಾಪೋಕ್ಲು ಶ್ರೀ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವದ ಅಂಗವಾಗಿ ತಿರುವಪ್ಪ ಹಾಗೂ ಮುತ್ತಪ್ಪ ತೆರೆಗಳು ಜರುಗಿದವು.
ವರದಿ : ದುಗ್ಗಳ ಸದಾನಂದ.