ಮಡಿಕೇರಿ ಏ.11 NEWS DESK : ಕೊಡವ ಕೂಟಾಳಿಯಡ ಕೂಟದ ವತಿಯಿಂದ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕೊಡವ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪೊನ್ನಂಪೇಟೆ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷ ಚಂಗುಲಂಡ ಸೂರಜ್, ಕೊಡಗಿನಲ್ಲಿ ಕೊಡವಾಮೆ ಸಂಬಂಧಿಸಿ ದಂತೆ ಹಲವಾರು ಸಂಘಟನೆಗಳಿವೆ. ಆಚಾರ, ವಿಚಾರ, ಪದ್ಧತಿ, ಪರಂಪರೆ ಬೆಳೆಸುವಲ್ಲಿ ನಮ್ಮ ಸಂಘಟನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನಗಾರ್ತಿ ಮಾಳೇಟಿರ ಸೀತಮ್ಮ “ಕೊಡವಾಮೆಲ್ ಪೆತ್ತವಡ ಆರೈಕೆ” ಎನ್ನುವ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಅವರು ಬರೆದ “ಪೆತ್ತವಡ ಆರೈಕೆ” ಕೊಡವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ದಾನಿಗಳಾದ ಕೊಂಗಾಂಡ ಕಾಶಿ ಕಾರ್ಯಪ್ಪ, ಬಯವಂಡ ಮಹಾಬಲ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ಕೂಟದ ನಿರ್ದೇಶಕ ಕಾಳಮಂಡ ರಾಬಿನ್ ಅಚ್ಚಮ್ಮ, ಸದಸ್ಯೆ ಮಾಚಿಮಾಡ ಡಿಂಪಲ್ ವಾಸು ಹಾಜರಿದ್ದರು.
ಕೂಟದ ನಿರ್ದೇಶಕ ಕರ್ತುರ ರನ್ನು ಪೆಮ್ಮಯ್ಯ ಪ್ರಾರ್ಥಿಸಿದರು. ಸ್ಥಾಪಕ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ನಿರೂಪಣೆ ಮಾಡಿದರು. ಕೂಟದ ಸಹಕಾರ್ಯದರ್ಶಿ ನೂರೆರ ಸರಿತ ಉತ್ತಯ್ಯ ಸ್ವಾಗತಿಸಿದರು. ನಿರ್ದೇಶಕಿಯರಾದ ಕೊಟ್ಟಂಗಡ ಕವಿತ ವಾಸು ಹಾಗೂ ಬೊಜ್ಜಂಗಡ ಭವ್ಯ ದಿಲನ್ ಗಣ್ಯರನ್ನು ಪರಿಚಯಿಸಿದರು. ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯು ನಡೆಸಿದ್ದ ಕೊಡಗ್’ರ ಚುಪ್ಪಿ ಕೋಗಿಲೆಯ ಭಾಗ-3 ರ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ, ಟಾಪ್ ಟೆನ್ ಸ್ಥಾನ ಪಡೆದ ಮಕ್ಕಳಿಗೆ ಹಾಗೂ ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಂಘಟನೆಯು ಈ ಹಿಂದೆ ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆಯಲ್ಲಿ ನಡೆಸಿದ ಪದ್ಧತಿ ಪಡಿಪು ಶಿಬಿರದಲ್ಲಿ ಪಾಲ್ಗೊಂಡು ಸಮ್ಮಂದ ಅಡ್ಕುವ ಪದ್ದತಿ ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ನೆನಪಿನ ಕಾಣಿಕೆ ಹಾಗೂ ಮದುವೆಯಲ್ಲಿ ಸಮ್ಮಂದ ಅಡ್ಕುವ ಪದ್ದತಿ ನಡೆಸಿದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಸಿದ್ಧ ಆಟ್ ಪಾಟ್ ಪಡಿಪು ಶಿಬಿರದಲ್ಲಿ ಕತ್ತಿಯಾಟ್ ಕಲಿತ ಶಿಬಿರಾರ್ಥಿಗಳಿಗೆ ಮಾನ್ಯತೆ ಕಾಗದ, ನೆನಪಿನ ಕಾಣಿಕೆ ನೀಡಲಾಯಿತು.
ಮುಕ್ಕಾಟಿರ ಹಿತೈಷಿ ನಾಣಯ್ಯ ಅವರಿಂದ ನಡೆದ ಭರತನಾಟ್ಯಂ ಸ್ವಾಗತ ನೃತ್ಯ, ಚುಪ್ಪಿ ಕೋಗಿಲೆಯ ಸ್ಪರ್ಧೆಯ ಮಕ್ಕಳಿಂದ ಗಾಯನ, ತರಬೇತಿ ಪಡೆದ ಮಕ್ಕಳಿಂದ ಕತ್ತಿಯಾಟ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಕಲಿಕಾ ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳಿಂದ ಕೊಡವ ಜನಾಂಗದ ವಿಶೇಷ ಪದ್ದತಿಯಾದ ಸಮ್ಮಂದ ಅಡ್ಕುವ ಪದ್ದತಿಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಸಮ್ಮಂದ ಅಡ್ಕುವ ಪುಸ್ತಕದ, ಮತ್ತು ಪೆತ್ತವಡ ಆರೈಕೆ ಪುಸ್ತಕದ ಪ್ರದರ್ಶನ ಹಾಗೂ ಮಾರಾಟ ನಡೆಯಿತು.









